×
Ad

ಕೊಲ್ಲೂರು: ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

Update: 2023-07-29 22:07 IST

ಕೊಲ್ಲೂರು: ಜು.22ರಂದು ತನ್ನ ವಾಸದ ಮನೆಯಾದ ಮಕ್ಕೆಯ ಕೊಳಕೆಹೊಳೆ ಎಂಬಲ್ಲಿ ಮನೆ ಮಂದಿಯೊಂದಿಗೆ ಊಟ ಮಾಡಿ ಮಲಗಿದ್ದು ಜು.23ರಂದು ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದ ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಮಕ್ಕೆ ಕೊಳಕೆಹೊಳೆ ನಿವಾಸಿ ಸುರೇಶ (28) ಮೃತದೇಹ ಶನಿವಾರ ಸಂಜೆ ವೇಳೆ ಪತ್ತೆಯಾಗಿದೆ.

ಜಡ್ಕಲ್ ಗ್ರಾಮದ ಕಾನ್ಕಿ ಹಾಸ್ಕಲ್ ಪಾರೆ ಎಂಬಲ್ಲಿನ ತೋಟವೊಂದರ ನಡುವೆ ಹಾದುಹೋಗುವ ಹರಿಯುವ ಮೆಕ್ಕೆ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಸುರೇಶ್ ಮನೆಯಿಂದ ಬಹಿರ್ದಸೆಗೆ ಹೋದ ಸಂದರ್ಭ ಕಳೆದ ವಾರ ವಿಪರೀತ ಮಳೆಯಿದ್ದರಿಂದ ತುಂಬಿ ಹರಿಯುವ ಹೊಳೆಗೆ ಬಿದ್ದು ಕೊಚ್ಚಿಹೋಗಿ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಕೊಲ್ಲೂರು ಠಾಣೆ ಉಪನಿರಿಕ್ಷಕಿ ಜಯಶ್ರೀ, ಸುಧಾರಾಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News