×
Ad

ಕೋಟ: ಕಾಂಗ್ರೆಸ್ ಕಾರ್ಯಕರ್ತನನ್ನು ಅಕ್ರಮ ಬಂಧನದಲ್ಲಿರಿಸಿ ಮಾರಣಾಂತಿಕ ಹಲ್ಲೆ; ಆರೋಪ

Update: 2023-08-30 21:12 IST

ಸಾಂದರ್ಭಿಕ ಚಿತ್ರ

ಕೋಟ, ಆ.30: ತಂಡವೊಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆ.29ರಂದು ರಾತ್ರಿ ವೇಳೆ ಮುದ್ದೂರು ಎಂಬಲ್ಲಿ ನಡೆದಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಎಂಬವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಮೇಲೆ ಹಳೆ ದ್ವೇಷದ ಕಾರಣಕ್ಕಾಗಿ ಬಿಜೆಪಿ ಮುಖಂಡರಾದ ಪ್ರತಾಪ್ ಹೆಗ್ಡೆ, ಹರೀಶ್, ದಿನೇಶ್ ಮತ್ತು ಗಣೇಶ್ ಎಂಬವರು ನೆಂಚಾರು ಹಾಲು ಡೈರಿಗೆ ಹಾಲು ಕೊಡಲು ಬಂದಿದ್ದ ಪ್ರಭಾಕರ ಪೂಜಾರಿಯನ್ನು ಕಾರಿನಲ್ಲಿ ಅಪಹರಿಸಿ ಮುದ್ದೂರಿನಲ್ಲಿರುವ ಪ್ರತಾಪ್ ಹೆಗ್ಡೆಯ ಕಚೇರಿಗೆ ಕರೆದುಕೊಂಡು ಹೋಗಿ ಅಕ್ರಮ ಬಂಧನದಲ್ಲಿರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News