×
Ad

ಕೋಟ: ರೈಲು ಢಿಕ್ಕಿ ಹೊಡೆದು ನಿವೃತ್ತ ಪೋಸ್ಟ್‌ ಮ್ಯಾನ್ ಮೃತ್ಯು

Update: 2024-01-21 12:48 IST

File Photo | PTI ಸಾಂದರ್ಭಿಕ ಚಿತ್ರ

ಕೋಟ: ಚಲಿಸುತ್ತಿದ್ದ ರೈಲು ಢಿಕ್ಕಿ ಹೊಡೆದ ಪರಿಣಾಮ ನಿವೃತ್ತ ಪೋಸ್ಟ್‌ ಮ್ಯಾನ್ ಮೃತಪಟ್ಟ ಘಟನೆ ಜ.20ರಂದು ಸಂಜೆ 7 ಗಂಟೆ ಸುಮಾರಿಗೆ ಕೆದೂರು ಎಂಬಲ್ಲಿ ನಡೆದಿದೆ.

ಮೃತರನ್ನು ಕುಂದಾಪುರ ತೆಕ್ಕಟ್ಟೆಯ ಕುಷ್ಠ(78) ಎಂದು ಗುರುತಿಸಲಾಗಿದೆ. ನಿವೃತ್ತ ಪೋಸ್ಟ್‌ ಮ್ಯಾನ್ ಆಗಿರುವ ಇವರು, ಕಳೆದ 3 ವರ್ಷಗಳಿಂದ ಮೆದುಳು ಜ್ವರ ಖಾಯಿಲೆಯಿಂದ ಬಳಲುತ್ತಿದ್ದರು. ಮಲ್ಯಾಡಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ಇವರು, ಸ್ಮರಣ ಶಕ್ತಿ ಇಲ್ಲದೇ ದಾರಿ ತಪ್ಪಿಹೋಗಿದ್ದರು ಎನ್ನಲಾಗಿದೆ.

ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಇವರು, ರೈಲು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News