×
Ad

ಕೋಟ: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

Update: 2023-10-23 21:02 IST

ಕೋಟ, ಅ.23: ಕೃಷಿ ಕೆಲಸ ಮುಗಿಸಿ ಸಂಜೆಯ ವೇಳೆ ಕೈಕಾಲು ತೊಳೆಯಲು ಹೊಳೆಗೆ ಇಳಿದಿದ್ದ ಯುವಕನೋರ್ವ ಅಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ಕುಂದಾಪುರ ತಾಲೂಕು ಬೇಳೂರು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಪ್ರಶಾಂತ ಆಚಾರ್ಯ (22)  ಮೃತಪಟ್ಟ ಯುವಕ. ಇವರು ನಿನ್ನೆ ಅಪರಾಹ್ನದ ಬಳಿಕ ಸ್ನೇಹಿತರೊಂದಿಗೆ ತೋಟದ ಸಸಿ ಬುಡ ಮಾಡುವ ಕೆಲಸಕ್ಕಾಗಿ ತೆರಳಿದ್ದು, ಕೆಲಸ ಮುಗಿಸಿ ಸಂಜೆ 5:45ರ ಸುಮಾರಿಗೆ ಕೈಕಾಲು ತೊಳೆಯಲು ಕೊಮೆ ಹೊಳೆ ಆರ್ ಬೆಟ್ಟು ಗುಂಡಿ ಎಂಬಲ್ಲಿ ಇಳಿದಾಗ ಅಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News