×
Ad

ಕುಂದಾಪುರ: ಶ್ರೀ ಮಾತಾ ಆಸ್ಪತ್ರೆ - ಪರಿವರ್ತನಾ ಫೌಂಡೇಶನ್ ಪ್ರವರ್ತಕ ಡಾ.ಸತೀಶ್ ಪೂಜಾರಿ ನಿಧನ

Update: 2024-07-11 09:33 IST

ಕುಂದಾಪುರ, ಜು.11: ಖ್ಯಾತ ವೈದ್ಯರು, ಶ್ರೀ ಮಾತಾ ಆಸ್ಪತ್ರೆ ಮತ್ತು ಪರಿವರ್ತನಾ ಫೌಂಡೇಶನ್ ಪ್ರವರ್ತಕ ಡಾ.ಸತೀಶ್ ಪೂಜಾರಿ (54) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮನಸ್ಮಿತ ಫೌಂಡೇಶನ್ ಮೂಲಕ ಉತ್ತಮ ಕಾರ್ಯಕ್ರಮ ಸಂಯೋಜಕರಾಗಿ ವೈದ್ಯ ವೃತ್ತಿ ಜೊತೆಗೆ ಹಾಡುಗಾರರಾಗಿದ್ದ ಅವರು ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳ ಸಂಯೋಜಕರಾಗಿದ್ದರು. ಮೃತರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕುಂದಾಪುರ ಕನ್ನಡ ಹಾಡಿನ ಆಲ್ಬಮ್ ಸಾಂಗ್ ಮಾಡಿದ್ದರು. ಕುಂದಾಪುರ ಐಎಂಎ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News