Kundapura | ಎಂ. ಕೋಡಿ ಕಡಲತೀರಕ್ಕೆ ಬಂತು ರಾಶಿ ರಾಶಿ 'ಬೂತಾಯಿ' !
ಮೀನು ಸಂಗ್ರಹಿಸಲು ಮುಗಿಬಿದ್ದ ಸಾರ್ವಜನಿಕರು
ಕುಂದಾಪುರ, ಸೆ.26: ತಾಲೂಕಿನ ಎಂ. ಕೋಡಿ ಕಡಲತೀರದಲ್ಲಿ ಶನಿವಾರ (ಸೆ.26) ಬೆಳಗ್ಗೆ ಬೂತಾಯಿ (ಬೈಗೆ) ಮೀನು ರಾಶಿ ದಡಕ್ಕೆ ಬಂದಿದ್ದು, ಮೀನು ಹಿಡಿಯಲು ನೂರಾರು ಮಂದಿ ಕಡಲ ತೀರದಲ್ಲಿ ಜಮಾಯಿಸಿದರು.
ಸಮುದ್ರದ ಅಲೆಗಳೊಂದಿಗೆ ದಡಕ್ಕೆ ಬಂದ ಭಾರೀ ಪ್ರಮಾಣದ ಬೂತಾಯಿ ಮೀನುಗಳನ್ನು ಸ್ಥಳೀಯರು ಸೇರಿದಂತೆ ನೂರಾರು ಮಂದಿ ಮುಗಿಬಿದ್ದು ಸಂಗ್ರಹಿಸಿದರು. ಕೈಚೀಲ, ಬಕೆಟ್ ಸೇರಿದಂತೆ ವಿವಿಧ ಪರಿಕರಗಳನ್ನು ಹಿಡಿದು ಜನರು ಮೀನು ಸಂಗ್ರಹಿಸುತ್ತಿರುವ ದೃಶ್ಯ ಕಂಡುಬಂತು.