×
Ad

ನಾಗರಿಕ ಸಮಿತಿಯಿಂದ ಬೃಹತ್ ಗಾತ್ರದ ರಾಷ್ಟ್ರಧ್ವಜ ಪ್ರದರ್ಶನ

Update: 2023-08-23 21:48 IST

ಉಡುಪಿ, ಆ.23: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ನಗರದ ಮಾರುತಿ ವಿಥಿಕಾದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

ಬೃಹತ್ ಗಾತ್ರದ ರಾಷ್ಟ್ರಧ್ವಜ ಪ್ರದರ್ಶಿಸಿ, ಚೆಂಡೆ, ತಾಳಮದ್ದಲೆಯೊಂದಿಗೆ ಸಂಭ್ರಮ ಪಡಲಾಯಿತು. ಬಳಿಕ ಸಾರ್ವಜನಿ ಕರಿಗೆ ಸಿಹಿತಿಂಡಿ ಹಂಚಲಾಯಿತು. ಬೃಹತ್ ಪರದೆಯ ಮೂಲಕ ಚಂದ್ರಯಾನದ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾ ಯಿತು. ನಿತ್ಯಾನಂದ ಒಳಕಾಡು ಸಹಿತ ನಾಗರಿಕ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News