ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ವಜ್ರದ ಮಂಗಳ ಸೂತ್ರ ಪೆಂಡೆಂಟ್ ಉತ್ಸವಕ್ಕೆ ಚಾಲನೆ
ಉಡುಪಿ, ಅ.20: ಉಡುಪಿಯ ಗೀತಾಂಜಲಿ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ಅ.29ರವರೆಗೆ ಹಮ್ಮಿಕೊಳ್ಳಲಾದ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.
ಶೋಭಿತ ಸುಜಯ್, ಅಶ್ವಿನಿ ಆರ್.ಶೆಟ್ಟಿ, ಪೂರ್ಣಿಮಾ ಶೆಟ್ಟಿ ವಿವಿಧ ಸಂಗ್ರಹಗಳನ್ನು ಅನಾವರಣಗೊಳಿಸಿದರು. ಈ ಸಂದರ್ಭ ದಲ್ಲಿ ಮಲಬಾರ್ ಗೋಲ್ಡ್ ಸ್ಟೋರ್ ಮೆನೇಜರ್ ಪುರಂದರ ತಿಂಗಳಾಯ, ಜಿಆರ್‌ಎಂ ರಾಘವೇಂದ್ರ ನಾಯಕ್, ಹರೀಶ್ ಎಂ.ಜಿ., ಎಎಂಎಂ ತಂಝೀಮ್ ಶಿರ್ವ, ಗ್ರಾಹಕರು ಉಪಸ್ಥಿತರಿದ್ದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಪ್ರದಾಯಿಕ ಸೊಬಗಿನ ಮತ್ತು ಸಮಕಾಲಿನ ಅನುಗ್ರಹದ ಅದ್ಬುತವಾದ ಮಂಗಳಸೂತ್ರ ಪೆಂಡೆಂಟ್ ಅತ್ಯಾಕರ್ಷಕ ಮಂಗಳಸೂತ್ರವನ್ನು ನ್ಯಾಯಯುತ ಬೆಲೆಗಳಲ್ಲಿ ಇನ್ನಷ್ಟು ವಿಶೇಷಗೊಳಿಸಲಾಗಿದೆ. ಚಿನ್ನ ಮತ್ತು ವಜ್ರಗಳಿಂದ ತಯಾರಿಸ ಲಾದ ದೈನಂದಿನ ಉಡುಗೆಗೆ ಒಪ್ಪುವಂತಹ ಪರಿಪೂರ್ಣ ವಿನ್ಯಾಸಗಳ ಸರಗಳು, ಪರೀಕ್ಷಿಲಾಗಿರುವ ಮತ್ತು ಪ್ರಮಾಣಿಕೃತ ವಜ್ರಗಳು ಈ ಉತ್ಸವದಲ್ಲಿ ಲಭ್ಯ ಇವೆ.
ವಜ್ರದ ಆಭರಣದ ಮೇಲೆ ಶೇ.100 ವಿನಿಮಯ ಮೌಲ್ಯ ಹಾಗೂ ವಿಶೇಷ ಕೊಡುಗೆಯಾಗಿ ಪ್ರತಿ 30ಸಾವಿರ ಖರೀದಿಗೆ ಚಿನ್ನದ ನಾಣ್ಯ, ವಜ್ರದ ಆಭರಣದ ಮೇಲೆ ಶೇ.30ರಷ್ಟು, ರತ್ನದ ಕಲ್ಲು ಹಾಗೂ ಪೊಲ್ಕಿ ಆಭರಣದ ಮೇಕಿಂಗ್ ಚಾರ್ಜ್ ಮೇಲೆ ಶೇ.30ರಷ್ಟು ರಿಯಾಯಿತಿ ನೀಡಲಿದೆ.