×
Ad

ಮಲ್ಪೆ: ಸ್ಕೂಟರ್ ಸಮೇತ ನೀರಿಗೆ ಬಿದ್ದ ಮೀನುಗಾರ ಮೃತ್ಯು

Update: 2024-01-02 21:04 IST

ಮಲ್ಪೆ: ಬಂದರಿನ ದಕ್ಕೆಗೆ ಸ್ಕೂಟರ್ ಸಮೇತ ಬಿದ್ದು ತಮಿಳುನಾಡು ಮೂಲದ ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ತಮಿಳುನಾಡು ಮೂಲದ ಮುರುಗೇಸನ್(58) ಎಂದು ಗುರುತಿಸಲಾಗಿದೆ.

ಮಲ್ಪೆ ಬಂದರಿನಲ್ಲಿ ಸುದರ್ಶನ ಎಂಬವರ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ಜ.1ರಂದು ಕೆಲಸ ಮುಗಿಸಿ ಚಾ ಕುಡಿಯಲು ಅಂಗಡಿಗೆ ಹೋಗಿದ್ದರು. ಅಲ್ಲಿಂದ ಸ್ಕೂಟರ್‌ನಲ್ಲಿ ಹೊಗುತ್ತಿರುವಾಗ ಬಾಪುತೋಟದ ಹೊಸ ಕಚೇರಿ ದಕ್ಕೆ ಬಳಿ ಸ್ಕಿಡ್ ಆಗಿ ಸ್ಕೂಟರ್ ಸಮೇತ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾದರೆನ್ನಲಾಗಿದೆ.

ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹುಡುಕಾಡಿದಾಗ ಸ್ಕೂಟರ್ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಹುಡುಕಾಡಿದಾಗ ಅಳಿವೆ ಬಾಗಿಲಿನಲ್ಲಿ ಮುರುಗೇಸನ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News