×
Ad

ಮಲ್ಪೆ: ಗೆಸ್ಟ್ ಹೌಸ್‌ನಲ್ಲಿ ಅಕ್ರಮ ಮದ್ಯ ಸೇವನೆ; 13 ಮಂದಿ ವಶಕ್ಕೆ

Update: 2023-09-24 17:17 IST

ಮಲ್ಪೆ : ಬಡಾನಿಡಿಯೂರು ಗ್ರಾಮದ ಕದಿಕೆ ಎಂಬಲ್ಲಿರುವ ಗೆಸ್ಟ್ ಹೌಸ್‌ನಲ್ಲಿ ಸೆ.23ರಂದು ರಾತ್ರಿ ವೇಳೆ ಅಕ್ರಮವಾಗಿ ಮದ್ಯಪಾನ ಸೇವಿಸುತ್ತಿದ್ದ 13 ಮಂದಿಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಪ್ರಸಾದ್, ಲತೀಶ, ಪ್ರೀತಮ್, ರಂಜಿತ್, ಲೊಕೇಶ್, ಬಾಲರಾಜ್, ಪ್ರದೀಪ್, ಮಿಥುನ್, ಶರತ್, ಅಭಿ, ಸಂದೇಶ, ಅಜ್ಞೆಶ್, ಪರಶು ಮದ್ಯ ಸೇವಿಸುತ್ತಿದ್ದ ಆರೋಪಿಗಳು.

ಇವರು ಸಂದೀಪ್ ಎಂಬವರ ಮಾಲಕತ್ವದ ಗೆಸ್ಟ್ ಹೌಸ್‌ನ ವರಾಂಡ ಮತ್ತು ರೂಮಿನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸೇವಿಸುತ್ತಿ ದ್ದರೆನ್ನಲಾಗಿದೆ. ಇವರಿಂದ ವಿವಿಧ ಕಂಪೆನಿಗಳ ಮದ್ಯವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News