×
Ad

ಮಲ್ಪೆ: ಉಮೀದ್ ಪೋರ್ಟಲ್ ಬಗ್ಗೆ ಮಾಹಿತಿ‌ ಕಾರ್ಯಾಗಾರ

Update: 2025-11-05 22:22 IST

ಮಲ್ಪೆ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನದಂತೆ ಉಮೀದ್(UWMEED) ಪೋರ್ಟಲ್ ಹಾಗೂ ಅದರಲ್ಲಿ ವಕ್ಫ್ ಆಸ್ತಿಗಳನ್ನು ಅಪ್ಲೋಡ್ ಮಾಡುವ ಬಗ್ಗೆ ವಕ್ಫ್ ಸಂಸ್ಥೆಗಳಿಗೆ ಮಾಹಿತಿ ಕಾರ್ಯಗಾರವನ್ನು ಬುಧವಾರ ಮಲ್ಪೆ ಜಾಮಿಯಾ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯರುಗಳಾದ ಅನ್ವರ್ ಬಾಷಾ ಸಾಹೇಬ್, ರಿಯಾಝ್ ಖಾನ್ ಸಾಹೇಬ್ ಹಾಗೂ ಖಾಲಿದ್ ಅಹ್ಮದ್ ಸಾಹೇಬ್, ಉಮೀದ್ ಪೋರ್ಟಲ್ ನಲ್ಲಿ ವಕ್ಫ್ ಆಸ್ತಿಗಳನ್ನು ಯಾಕಾಗಿ ನಂದಣಿ ಮಾಡಬೇಕು ಮತ್ತು ಇದರಿಂದ ಮುಂದಿನ ಪ್ರಯೋಜನಗಳು ಏನು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಈ ಬಗ್ಗೆ ಕೆಲಸ ಮಾಡುವಂತೆ ಅವರು ಮನವಿ ಮಾಡಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್, ಮಲ್ಪೆ ಜಾಮಿಯಾ ಮಸೀದಿ ಅಧ್ಯಕ್ಷ ಯಾಹ್ಯಾ‌ ನಕ್ವಾ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ, ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ, ನಮ್ಮ ನಾಡ ಒಕ್ಕೂಟದ ಮುಸ್ತಾಕ್ ಬೆಳ್ವೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಸರ್ಫುದ್ದೀನ್, ರಹಮತುಲ್ಲಾ ಹೂಡೆ, ಮುಸ್ಲಿಂ ಮುಖಂಡರುಗಳು ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಹಾಜರಿದ್ದರು. ಸಭೆಯಲ್ಲಿ ಸಂಸ್ಥೆಗಳ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಸದಸ್ಯರು ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News