×
Ad

ಮಲ್ಪೆ: ಮೊಬೈಲ್ ಟವರ್ಸ್ ಕಂಪೆನಿಯ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2023-09-12 21:32 IST

ಮಲ್ಪೆ, ಸೆ.12: ಟೆಲಿಕಾಂ ಅಪರೇಟರ್‌ಗಳಿಗೆ ಟೆಲಿಕಾಂ ಟವರ್ಸ್ ಮತ್ತು ಮೂಲ ಸೌಕರ್ಯ ಒದಗಿಸುವ ಕಂಪನಿಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಈ ಕಂಪೆನಿ ಕೊಡವೂರು ಗ್ರಾಮದ ಶ್ರೀನಿವಾಸ ಎಂಬವರ ಜಾಗವನ್ನು 2009ರಿಂದ ಒಪ್ಪಂದದ ಪ್ರಕಾರ ಪಡೆದುಕೊಂಡು ಮೊಬೈಲ್ ಟವರ್ಸ್ ಹಾಗೂ ಅದಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ಅಳವಡಿಸಿಕೊಂಡಿತ್ತು. 2023ರ ಮಾರ್ಚ್ ತಿಂಗಳಲ್ಲಿ ಟವರ್ಸ್‌ಗಳನ್ನು ನೋಡಿಕೊಳ್ಳುವ ಟೆಕ್ನಿಷಿಯನ್ ಬಂದು ಜಾಗದಲ್ಲಿ ಪರಿಶೀಲಿಸಿದಾಗ ಜಾಗದಲ್ಲಿ ಅಳವಡಿಸಿದ ಮೊಬೈಲ್ ಟವರ್, ಡಿಸೇಲ್ ಜನರೇಟರ್, ಬ್ಯಾಟರಿ ಇತ್ಯಾದಿಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ 36,75,196ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News