×
Ad

ಮಲ್ಪೆ: ಬೋಟಿನಲ್ಲಿದ್ದ ಮೀನಿನಿಂದ ವಿಷ ಅನಿಲ; ಈಶ್ವರ ಮಲ್ಪೆ ಸಹಿತ ಮತ್ತಿಬ್ಬರು ಅಸ್ವಸ್ಥ

Update: 2023-09-02 22:25 IST

ಮಲ್ಪೆ: ಬೋಟಿನಲ್ಲಿದ್ದ ಮೀನಿನಿಂದ ಹೊರ ಸೂಸಿದ ವಿಷ ಅನಿಲದ ಪರಿಣಾಮ ಜೀವ ರಕ್ಷಕ ಈಶ್ವರ ಮಲ್ಪೆ ಸೇರಿದಂತೆ ಮತ್ತೆ ಇಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಇಂದು ಸಂಜೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ಆಗಮಿಸಿದ್ದ ಬೋಟಿನಿಂದ ಮೀನು ಖಾಲಿ ಮಾಡಲು ಮೀನುಗಾರರೊಬ್ಬರು ಬೋಟಿನ ಸ್ಟೋರೇಜ್ ರೂಮಿಗೆ ಇಳಿದರು ಎನ್ನಲಾಗಿದೆ. ಈ ವೇಳೆ ಅವರು ಮೀನಿನ ವಿಷ ಅನಿಲದಿಂದಾಗಿ ಅಲ್ಲೇ ಅಸ್ವಸ್ಥಗೊಂಡು ಬಿದ್ದರು.

ಕೂಡಲೇ ಜೀವ ರಕ್ಷಕ ಈಶ್ವರ ಮಲ್ಪೆ ಅಸ್ವಸ್ಥಗೊಂಡು ಬಿದ್ದವರನ್ನು ರಕ್ಷಿಸಲು ಮುಂದಾಗಿದ್ದು ಇದರಿಂದ ಈಶ್ವರ ಮಲ್ಪೆ ಕೂಡ ವಿಷ ಅನಿಲದಿಂದ ಉಸಿರು ಕಟ್ಟಿ ಅಸ್ವಸ್ಥರಾದರು ಎಂದು ತಿಳಿದುಬಂದಿದೆ. ತಕ್ಷಣ ಇವರಿಬ್ಬರನ್ನು ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಗಳಾಗಿ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News