×
Ad

ಮಲ್ಪೆ: ಮುಳುಗುತ್ತಿದ್ದ ದೋಣಿಯಿಂದ ಐವರು ಮೀನುಗಾರರ ರಕ್ಷಣೆ

Update: 2023-07-18 20:59 IST

ಮಲ್ಪೆ, ಜು.18: ಮಲ್ಪೆ ಬಂದರಿನ ಅಳಿವೆ ಬಾಗಿಲಿನಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿದ್ದ ಐವರು ಮೀನುಗಾರರನ್ನು ಮತ್ತು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ರಕ್ಷಿಸಿದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಆರ್ಭಟಕ್ಕೆ ಒಡೆದು ನೀರು ತುಂಬಿ ದೋಣಿಯು ಮುಳುಗುವ ಸ್ಥಿತಿಗೆ ತಲುಪಿತ್ತು. ವಿಷಯ ತಿಳಿದು ತಕ್ಷಣ ಕಾರ್ಯ ಪ್ರವ್ರತ್ತರಾದ ಆಪತ್ಭಾಂಧವ ಈಶ್ವರ್ ಮಲ್ಪೆ ತನ್ನ ತಂಡ ಜೊತೆ ದೋಣಿಯ ಮೂಲಕ ತೆರಳಿ ಐದು ಜನ ಮೀನುಗಾರರನ್ನು ರಕ್ಷಿಸಿದ್ದರು.

ಬಳಿಕ ಬಂದರಿಗೆ ಬಂದು ಮತ್ತೊಂದು ದೋಣಿಯ ಮೂಲಕ ಸಮುದ್ರದ ಅಲೆಗಳನ್ನು ಲೆಕ್ಕಿಸದೆ ಮುಳುಗುತ್ತಿರುವ ದೋಣಿಯ ಬಳಿ ತೆರಳಿ ಸುಮಾರು ಮೂರು ಲಕ್ಷ ರೂ. ಮೌಲ್ಯದ ಎರಡು ಎಂಜಿನ್ ಹಾಗೂ ಇಂಧನಗಳನ್ನು ಸುರಕ್ಷಿತವಾಗಿ ತರುವಲ್ಲಿ ಯಶಸ್ವಿಯಾದರು. ಈ ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ಜೊತೆಗೆ ಬಿಲಾಲ್ ಮಲ್ಪೆ, ರವಿ, ಅನಿಲ್ ಹಾಗೂ ನಾಲ್ವರು ಕೈಜೋಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News