ಮಲ್ಪೆ: ವಿದ್ಯಾರ್ಥಿಗಳಿಂದ ಕ್ರಿಸ್ಮಸ್‌ಗಾಗಿ ಮರಳು ಶಿಲ್ಪ
Update: 2025-12-25 20:31 IST
ಮಲ್ಪೆ, ಡಿ.25: ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸಸ್‌ನ 10ರಿಂದ 18ವರ್ಷದೊಳಗಿನ ಆಯ್ದ ವಿದ್ಯಾರ್ಥಿಗಳು ಸಾಂತಾಕ್ಲಾಸ್ ಉಡುಗೊರೆಗಳೊಂದಿಗೆ ಸಿಹಿಹಂಚಿ ಕ್ರಿಸ್ಮಸ್ ಶುಭಾಶಯ ಕೋರುವ ಮರಳು ಶಿಲ್ಪವನ್ನು ಕಲಾವಿದ ಹರೀಶ್ ಸಾಗಾ ಇವರ ಮಾರ್ಗದರ್ಶನದಲ್ಲಿ ಮಲ್ಪೆ ಕಡಲ ತೀರದಲ್ಲಿ ರಚಿಸಿದರು.
ತ್ರಿವರ್ಣ ಕಲಾಶಾಲೆಯ ಕಲಾ ವಿದ್ಯಾರ್ಥಿಗಳಾದ ಅಶುತೋಷ್ ಎಂ. ನಾಯಕ್, ವೈಷ್ಣವಿ ಅರುಣ್, ಓಂ. ಪ್ರದೀಪ್ ವಿಹಾನ್ ಶೇರಿಗಾರ್, ಸ್ಪರ್ಶ್ ಎಸ್. ಪೂಜಾರಿ, ಮೆಹಕ್ ಎಂ, ಶೇಯಾ ಎಂ. ದೇವಾಡಿಗ, ಸಾಧನಾ ಎನ್. ವಿ, ವೈನವಿ ಆರ್ ಪದ್ಮಶಾಲಿ, ಸ್ಮತಿ ತುಂಗಾ ಪಿ, ಭವಿಷ್ ಶೇರಿಗಾರ್, ರಿದ್ದೀಶ್ ನಾಯಕ್, ಕವಿತಾ ಎಂ. ನಾಯಕ್, ವಿದ್ಯಾರಾಣಿ ಮತ್ತು ಸ್ಯಾಂಡ್ ಥೀಂ ಉಡುಪಿ ತಂಡದ ಕಲಾವಿದರಾದ ಸಂತೋಷ್ ಭಟ್ ಹಾಲಾಡಿ, ಉಜಿಲ್ ನಿಟ್ಟೆ ಮರಳು ಶಿಲ್ಪ ರಚನೆಯಲ್ಲಿ ಪಾಲ್ಗೊಂಡಿದ್ದರು.