ಕೋಟ: ನಿರ್ಮಾಣ ಹಂತದ ಹೊಸ ಮನೆಯ ಸ್ಲ್ಯಾಬ್‌ನಿಂದ ಬಿದ್ದು ಯಜಮಾನ ಮೃತ್ಯು
Update: 2025-02-11 11:55 IST
ಸಾಂದರ್ಭಿಕ ಚಿತ್ರ (credit: Grok)
ಕೋಟ: ನಿರ್ಮಾಣ ಹಂತದ ಮನೆಯ ಸ್ಲಾಬ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ಮನೆ ಯಜಮಾನ ಮೃತಪಟ್ಟ ಘಟನೆ ಫೆ.10ರಂದು ರಾತ್ರಿ 9.15ರ ಸುಮಾರಿಗೆ ನಡೆದಿದೆ.
ಮೃತರನ್ನು ಬೇಳೂರು ಗ್ರಾಮದ ಗೋಪಾಲ(62) ಎಂದು ಗುರುತಿಸಲಾಗಿದೆ. ಇವರು ಹೊಸ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಅದನ್ನು ನೋಡಲು ಮಕ್ಕಳ ಜೊತೆ ಹೋಗಿದ್ದರು. ಈ ವೇಳೆ ಗೋಪಾಲ ಮನೆಯ ಮೊದಲನೇ ಅಂತಸ್ತಿಗೆ ಹೋಗಿ ನೋಡುತ್ತಿರುವಾಗ ಆಯತಪ್ಪಿ ಸ್ಲಾಬ್‌ನಿಂದ ಕೆಳಗೆ ನೆಲಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.