ಮಣಿಪಾಲ | ಅನಧಿಕೃತ ರೆಂಟಲ್ ಕಾರು, ಬೈಕ್ ಮಳಿಗೆಗಳ ಮೇಲೆ ದಾಳಿ: ಹಲವು ಕಾರುಗಳು ಮುಟ್ಟುಗೋಲು
ಉಡುಪಿ, ಫೆ.9: ಉಡುಪಿ ಹಾಗೂ ಮಣಿಪಾಲ ಪರಿಸರದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ರೆಂಟಲ್ ಬೈಕ್ ಮತ್ತು ಕಾರು ಸರ್ವಿಸ್ ಕೇಂದ್ರಗಳ ಮೇಲೆ ಗುರುವಾರ ದಾಳಿ ನಡೆಸಿದ ಆರ್.ಟಿ.ಓ. ಅಧಿಕಾರಿಗಳು ಹಲವು ವಾಹನಗಳನ್ನು ಮುಟ್ಟುಗೋಲು ಹಾಕಿರುವ ಬಗ್ಗೆ ವರದಿಯಾಗಿದೆ.
ವಾಟ್ ಯು ವಾಂಟ್, ಎಸ್.ಜಿ.ರೈಡರ್ಸ್, ಆರ್.ಎನ್.ಆರ್. ರೆಂಟಲ್ ಬೈಕ್, ಸಿಟಿ ರೆಂಟಲ್ ಬೈಕ್ ಸರ್ವಿಸ್ಗಳ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಂಟಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ನೇತೃತ್ವದಲ್ಲಿ ಆರ್.ಟಿ.ಓ. ಮತ್ತು ಮೋಟರ್ ವಾಹನ ನಿರೀಕ್ಷಕರೊಂದಿಗೆ ಸರ್ವಿಸ್ ಸೆಂಟರ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಸಿಟಿ ರೆಂಟಲ್ ಬೈಕ್ ಮತ್ತು ಆರ್.ಎನ್.ಆರ್. ರೆಂಟಲ್ ಬೈಕ್ ಮಳಿಗೆಗಳನ್ನು ಮುಚ್ಚಿಸಿ, ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿದ್ದ ಸುಮಾರು 10ರಿಂದ 15 ಬಾಡಿಗೆ ಕಾರುಗಳನ್ನು ತಪಾಸಣೆ ಮಾಡಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.