×
Ad

ಅಂಗಡಿಗೆ ಬಂದ ವಿದ್ಯುತ್ ಬಿಲ್ 2,509 ರೂ. ಆನ್ಲೈನ್ ನಲ್ಲಿ ಚೆಕ್ ಮಾಡಿದರೆ 5,70,507 ರೂ. ಬಿಲ್!

Update: 2023-10-12 10:07 IST

ಉಡುಪಿ, ಅ.12: ನಗರದ ವಾಣಿಜ್ಯ ಮಳಿಗೆಯೊಂದರ ವಿದ್ಯುತ್ ಬಿಲ್ಲನ್ನು ಆನ್ಲೈನ್ ಮೂಲಕ ಪಾವತಿಸಲು ಮುಂದಾದ ಮಾಲಕರಿಗೆ ಮೆಸ್ಕಾಂ ಎಡವಟ್ಟು ಶಾಕ್ ನೀಡಿದೆ.

ನಗರದ ಸಂಸ್ಕೃತ ಕಾಲೇಜಿನ ಎದುರುಗಡೆ ಇರುವ ಸಾಧನಾ ರೆಡಿಮೇಡ್ ಮಳಿಗೆಯ ವಿದ್ಯುತ್ ಬಿಲ್ 2,509 ರೂ. ಬಂದಿದ್ದು, ಅದರ ಪಾವತಿಗೆ ಅ.15ರಂದು ಕೊನೆಯ ದಿನಾಂಕ ನಿಗದಿಪಡಿಸಲಾಗಿತ್ತು. ಪ್ರತೀ ಬಾರಿ ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ಲನ್ನು ಆನ್ ಲೈನ್ ಮೂಲಕ ಪೇಮೆಂಟ್ ಮಾಡುತ್ತಿದ್ದ ಅಂಗಡಿ ಮಾಲಕರು ಅದೇರೀತಿ ಅ.11ರಂದು ಆನ್ಲೈನ್ ಮೂಲಕ ಪಾವತಿಗೆ ಮುಂದಾದರು.

ಆದರೆ ಆನ್ ಲೈನ್ ನಲ್ಲಿ ತೋರಿಸುತ್ತಿದ್ದ ವಿದ್ಯುತ್ ಬಿಲ್ ನೋಡಿ ಮಾಲಕರು ದಂಗಾದರು. ಅದರಲ್ಲಿ 2,509 ರೂ ಬದಲು 5,70,507 ರೂ. ವಿದ್ಯುತ್ ಬಿಲ್ ತೋರಿಸುತ್ತಿತ್ತು. ಈ ರೀತಿ ಆನ್ಲೈನ್ ಬಿಲ್ ನಲ್ಲಿರುವ ದೋಷ ಸರಿಪಡಿಸಬೇಕೆಂದು ಮೆಸ್ಕಾಂ ಇಲಾಖೆಯನ್ನು ಅಂಗಡಿಯ ಮಾಲಕರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News