×
Ad

ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2023-11-03 20:44 IST

ಉಡುಪಿ, ನ.3: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೊಸದಿಲ್ಲಿಯಲ್ಲಿ ಬುಧವಾರ ನಡೆದ ತುಲಾಭಾರದ ವೇಳೆ ತಪ್ಪಿದ ಅವಘಡದ ಹಿನ್ನೆಲೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ ಆರೋಗ್ಯವನ್ನು ವಿಚಾರಿಸಿದರು.

ಶ್ರೀಗಳ ಆಪ್ತ ಸಹಾಯಕರಿಗೆ ಕರೆ ಮಾಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಸ್ವಾಮೀಜಿಗಳ ಆರೋಗ್ಯ ಕುರಿತಂತೆ ಮಾಹಿತಿಯನ್ನು ಪಡೆದುಕೊಂಡರು. ಶ್ರೀಗಳಿಗೆ ಸಣ್ಣ ಗಾಯವಾಗಿದ್ದನ್ನು, ಗಾಬರಿಪಡುವಂತದ್ದು ಏನಿಲ್ಲ. ಈಗ ಅವರು ಆರೋಗ್ಯವಾಗಿದ್ದು, ಹೊಸದಿಲ್ಲಿಯಿಂದ ಅಯೋಧ್ಯೆ ಯತ್ತ ಪ್ರಯಾಣಿಸುತ್ತಿದ್ದಾರೆ ಎಂದು ಆಪ್ತ ಸಹಾಯಕರು ತಿಳಿಸಿದರು ಎಂದು ಸಚಿವರು ಹೇಳಿದ್ದಾರೆ.

ಶ್ರೀವಿಶ್ವಪ್ರಸನ್ನ ತೀರ್ಥರಿಗೆ 60 ವರ್ಷ ತುಂಬಿದ ಪ್ರಯುಕ್ತ ಬುಧವಾರ ಹೊಸದಿಲ್ಲಿಯ ಪೇಜಾವರ ಮಠದಲ್ಲಿ ‘ಪ್ರಸನ್ನಾಭಿವಂದನಮ್’ ಕಾರ್ಯಕ್ರಮ ಏರ್ಪಡಿಸಿದ್ದು, ಈ ವೇಳೆ ನಡೆದ ತುಲಾಭಾರದ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು. ತುಲಾಭಾರಕ್ಕಾಗಿ ತಕ್ಕಡಿಗೆ ಕಟ್ಟಿದ್ದ ಹಗ್ಗ ತುಂಡಾಗಿ ಕೆಳಗೆ ಬೀಳುವ ವೇಳೆ ತಕ್ಕಡಿಯ ಒಂದು ಭಾಗ ತಲೆಗೆ ಬಡಿದು ಸಣ್ಣ ಗಾಯವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News