×
Ad

ಪೈನಾನ್ಸ್ ಹಣ ದುರುಪಯೋಗ: ಲಕ್ಷಾಂತರ ರೂ. ವಂಚನೆ

Update: 2023-07-25 21:28 IST

ಮಲ್ಪೆ, ಜು.25: ಫೈನಾನ್ಸ್ ಹಣ ಲೋನ್ ಆಫೀಸರ್ ಬ್ಯಾಂಕಿಗೆ ಪಾವತಿಸದೆ ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತ್ ಪೈನಾನ್ಸ್ ಇನ್‌ಕ್ಲ್ಸೂಷನ್ ಲಿಮಿಟೆಡ್ ಶಾಖೆಯ ಕಿದಿಯೂರು ಶಾಖೆಯಲ್ಲಿ ಲೋನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿಲೀಪ್ ಎಸ್.ಎಸ್., ಬಡ ಮಹಿಳೆಯರು ಸಂಘದಿಂದ ಸಾಲವಾಗಿ ಪಡೆದುಕೊಂಡ ಹಣಕ್ಕೆ ಇನ್ನು ಹೆಚ್ಚಿನ ಸಾಲ ಕೊಡಿಸುವುದಾಗಿ ನಂಬಿಸಿ ಮುಂಗಡವಾಗಿ ಸಾಲ ಮುರುಪಾವತಿಸಲು ತಿಳಿಸಿದ್ದನು.

2021ರ ನ.27ರಿಂದ 2023ರ ಜೂ.23ರವರೆಗೆ ದಿಲೀಪ್, ಸಂಘದ ಸದಸ್ಯರಿಂದ ಹಣವನ್ನು ವಸೂಲಾತಿ ಮಾಡಿ ಅದನ್ನು ಬ್ಯಾಂಕಿಗೆ ಕಟ್ಟದೆ ತನ್ನ ಸ್ವಂತ ಲಾಭಕ್ಕೆ ಬಳಸಿಕೊಂಡು 11,88,878ರೂ. ಹಣವನ್ನು ದುರುಪಯೋಗ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News