×
Ad

ಉಡುಪಿಯಲ್ಲಿ ತಾಯಿ, ಮಕ್ಕಳ ಹತ್ಯೆ ಪ್ರಕರಣ; ಎರಡು ದಿನಗಳಲ್ಲಿ ಆರೋಪಿಯ ಬಂಧನ: ಡಾ.ಜಿ.ಪರಮೇಶ್ವರ್

Update: 2023-11-14 15:15 IST

ಉಡುಪಿ, ನ.14: ತಾಯಿ, ಮಕ್ಕಳ ಹತ್ಯೆ ಪ್ರಕರಣದ ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸುವುದಾಗಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರವಾಣಿ ಮೂಲಕ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

ಗೃಹ ಸಚಿವರು ಮನೆ ಯಜಮಾನ ನೂರ್ ಮುಹಮ್ಮದ್ ಜೊತೆ ಇಂದು ದೂರವಾಣಿ ಜೊತೆ ಮಾತನಾಡಿದರು. ‘ನೀವು ನಮಗೆ ಕರೆ ಮಾಡಿ ಸಾಂತ್ವಾನ ಹಾಗೂ ಭರವಸೆ ನೀಡಿದಕ್ಕೆ ನಿಮಗೆ ಕೃತಜ್ಞತೆಗಳು. ಈ ಪ್ರಕರಣವನ್ನು ಅತೀ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ನೂರ್ ಮುಹಮ್ಮದ್ ಗೃಹ ಸಚಿವರಲ್ಲಿ ಮನವಿ ಮಾಡಿದರು.

ಈ ಕೃತ್ಯದಿಂದ ನಮ್ಮ ಸುತ್ತಮುತ್ತಲಿನ ಊರಿನ ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಇಲ್ಲಿಯ ಜನ ನಿನ್ನೆ ದೀಪಾವಳಿ ಕೂಡ ಆಚರಣೆ ಮಾಡದೆ ನಮ್ಮ ನೋವಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಆದುದರಿಂದ ಆದಷ್ಟು ಬೇಗ ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, ನಾವು ಈಗಾಗಲೇ ತನಿಖೆ ಪ್ರಾರಂಭಿಸಿದ್ದೇವೆ. ಈ ಸಂಬಂಧ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಇವತ್ತು ಇಲ್ಲ ನಾಳೆ ಒಳಗೆ ನಾವು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News