×
Ad

ಮುಲ್ಕಿ: ಸಾದಾತ್ ವಲಿಯ್ಯ್ ಝಿಕ್ರ್ ಸ್ವಲಾತ್ ಮಜ್ಲಿಸ್‌ನ 21ನೇ ವಾರ್ಷಿಕ ಸಮಾರಂಭ

Update: 2025-05-16 14:12 IST

ಮುಲ್ಕಿ: ಸಾದಾತ್ ಮದಾರಿ ಫೌಂಡೇಶನ್ (ರಿ) ಅಧೀನದ ಸಾದಾತ್ ವಲಿಯ್ಯ್ ಝಿಕ್ರ್ ಸ್ವಲಾತ್ ಮಜ್ಲಿಸ್ ಇದರ 21ನೇ ವಾರ್ಷಿಕ ಸಾಮೂಹಿಕ ವಿವಾಹ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಮುಲ್ಕಿ ಕೆರೆಕಾಡು ಸಾದಾತ್ ಮಂಝಿಲ್ ನಲ್ಲಿ ನಡೆಯಿತು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ಸಾಮೂಹಿಕ ವಿವಾಹ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎನ್.ಪಿ.ಎಮ್ ಜಲಾಲುದ್ದೀನ್ ತಂಙಳ್ ಈಶ್ವರಮಂಗಳ ದುಆ ನೆರವೇರಿಸಿದರು.

ಸಾದಾತ್ ಮದಾರಿ ಫೌಂಡೇಶನ್ (ರಿ) ಪ್ರ‌.ಕಾರ್ಯದರ್ಶಿ ಇರ್ಷಾದ್ ಕೆರೆಕಾಡು ಟ್ರಸ್ಟ್ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮೂರು ಜೋಡಿಗಳ ಸರಳ ವಿವಾಹಕ್ಕೆ ನೇತೃತ್ವ ವಹಿಸಿದರು‌. ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಸೌಹಾರ್ದ ಭಾಷಣ ಮಾಡಿದರು.

ದ.ಕ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್ ಮೊದ್ದೀನ್ ಹಾಜಿ ಅಡ್ಡೂರು, ಸಾದಾತ್ ಮದಾರಿ ಫೌಂಡೇಶನ್ (ರಿ) ಗೌವರವಾಧ್ಯಕ್ಷ ಎಂ.ಕೆ ಕೊಯಲಿ ಪಕ್ಷಿಕೆರೆ, ಸಾಮೂಹಿಕ ವಿವಾಹ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಯು ಮುಸಬ್ಬ ನೂರಾನಿಯ, ಮಾಳೂರು ದರ್ಗಾದ ಮುನೀರ್ ಅಹ್ಮದ್ ಮಾಳೂರು, ಎನ್.ಕೆ ಅಬೂಬಕ್ಕರ್ ಕುದ್ರೋಳಿ,ಸಾಮೂಹಿಕ ವಿವಾಹ ಸ್ವಾಗತ ಸಮಿತಿ ಕಾರ್ಯದರ್ಶಿ ಆಸೀಫ್ ಕೃಷ್ಣಾಪುರ, ಕೋಶಾಧಿಕಾರಿ ಅಸೀಫ್ ಅಬ್ದುಲ್ಲಾ ಉಳ್ಳಾಲ, ನಿರ್ದೇಶಕ ಫಕಿರಬ್ಬ ಮಾಸ್ಟರ್, ಗೌರವ ಸಲಹೆಗಾರ ಎಂ.ಎ ವಾಹಿದ್, ಪಕ್ಷಕೆರೆ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.

ಸಾದಾತ್ ಜುಮಾ ಮಸ್ಜಿದ್ ಖತೀಬ್ ತ್ವಯ್ಯಬ್ ಫೈಝಿ ಬೊಳ್ಳೂರು ಸ್ವಾಗತಿಸಿದರು. ಇಂದಿರಾನಗರ ಖಿಲ್ರಿಯ್ಯಾ ಮದ್ರಸ ಸದರ್ ಮುಅಲ್ಲಿಮ್ ಇಬ್ರಾನ್ ಮಖ್ದೂಮಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News