×
Ad

ಶಿರ್ವದ ಮುಲ್ಕಿ ಸುಂದರ್‌ ರಾಮ್ ಶೆಟ್ಟಿ ಕಾಲೇಜಿಗೆ ನ್ಯಾಕ್‌ನಿಂದ ಎ+ ಗ್ರೇಡ್ ಮಾನ್ಯತೆ

Update: 2023-08-04 21:25 IST

ಉಡುಪಿ, ಆ.4: ಶಿರ್ವದ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಕಾಲೇಜಿಗೆ ನ್ಯಾಕ್ ಮಾನ್ಯತೆ ನೀಡುವ ಸಲುವಾಗಿ ಆಗಮಿಸಿದ ಪರೀಕ್ಷಣಾ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದು, ನಾಲ್ಕನೆಯ ಆರ್ವತನೆಯ ಮೌಲ್ಯಮಾಪನದಲ್ಲಿ 3.36 ಅಂಕಗಳೊಂದಿಗೆ ಎ+ ಗ್ರೇಡ್ ಮಾನ್ಯತೆಯನ್ನು ನೀಡಿದೆ.

ಪ್ರಗತಿ ಪರಿಶೀಲನಾ ಸಮಿತಿಯು ಕಾಲೇಜಿನ ಶೈಕ್ಷಣಿಕ ಗುಣಮಟ್ಟ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶುಲ್ಕದಲ್ಲಿ ಒದಗಿಸುತ್ತಿ ರುವ ಉತ್ತಮ ಗುಣ ಮಟ್ಟದ ಶಿಕ್ಷಣ, ಹಳೆ ವಿದ್ಯಾರ್ಥಿ ಸಂಘದವರು ಒದಗಿಸುತ್ತಿರುವ ಉಚಿತ ಮಿಡ್-ಡೇ ಮೀಲ್, ವಿದ್ಯಾರ್ಥಿ ನಿಯರ ವಸತಿ ಗೃಹ, ಪುರಾತತ್ವ ವಸ್ತು ಸಂಗ್ರಹಾಲಯ,ಗ್ರಾಮೀಣ ನಿಟ್ಟೆ ವಿಶ್ವವಿದ್ಯಾನಿಲಯ ವತಿಯಿಂದ ನಿರ್ಮಾಣ ಗೊಳ್ಳುವ ಗ್ರಾಮೀಣ ಸಮುದಾಯ ಆರೋಗ್ಯ ಕೇಂದ್ರ, ಗರಿಷ್ಠ ಸಂಖ್ಯೆ ಸರ್ಕಾರೇತರ ವಿದ್ಯಾರ್ಥಿ ವೇತನ, ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಯ ಬದ್ಧತೆ ಇತ್ಯಾದಿಗಳನ್ನು ಪರಿಶೀಲನೆಯಲ್ಲಿ ಪ್ರಮುಖವಾಗಿ ಪರಿಗಣಿಸಿ ಶ್ಲಾಘಿಸಿದೆ.

ನ್ಯಾಕ್ ಎ+ ಗ್ರೇಡ್ ಮಾನ್ಯತೆ ಪಡೆಯಲು ಶ್ರಮಿಸಿದ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಎಂ.ಎಸ್.ಆರ್.ಎಸ್. ಹಳೆ ವಿದ್ಯಾರ್ಥಿ ಸಂಘ ಮುಂಬಯಿ, ಶಿರ್ವ ಮತ್ತು ಬೆಂಗಳೂರು ಅಭಿನಂದಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News