×
Ad

ಮುಳ್ಳಿಕಟ್ಟೆ: ಹೆದ್ದಾರಿ ಮಧ್ಯೆ ಪಿಕಪ್ ಪಲ್ಟಿ; ಚಾಲಕನಿಗೆ ಗಾಯ

Update: 2024-07-15 12:59 IST

ಕುಂದಾಪುರ: ಹಣ್ಣು ತುಂಬಿದ್ದ ಪಿಕಪ್ ವಾಹನ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ಸೋಮವಾರ ನಡೆದಿದೆ.

ಹುಬ್ಬಳ್ಳಿಯಿಂದ ಉಡುಪಿಯತ್ತ ಸಾಗುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಪಲ್ಟಿಯಾಗಿದೆ. ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ಬ್ಯಾರಿಕೇಡ್ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಜಾಹೀರಾತಿನ ಬ್ಯಾರಿಕೇಡ್ ಅಳವಡಿಸಿದ್ದೇ ಚಾಲಕನಿಗೆ ಗೊಂದಲವುಂಟಾಗಿ ವಾಹನ ಪಲ್ಟಿಯಾಗಲು ಕಾರಣವೆನ್ನಲಾಗಿದೆ.

ರಸ್ತೆಯ ಮಧ್ಯದಲ್ಲಿ ಅವೈಜ್ಞಾನಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ರಾತ್ರಿಯ ವೇಳೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಬ್ಯಾರಿಕೇಡ್ ಅಳವಡಿಸುವುದು ಮತ್ತು ರಾತ್ರಿಯ ವೇಳೆ ಬ್ಯಾರಿಕೇಡ್ ರಸ್ತೆಯಿಂದ ತೆರವು ಮಾಡಬೇಕೆಂದು ಸ್ಥಳೀಯರು ಹಾಗೂ ಚಾಲಕರು ಮನವಿ‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News