×
Ad

ಕುಂದಾಪುರ ನಗರ ಪೊಲೀಸ್ ನಿರೀಕ್ಷಕರಾಗಿ ನಂಜಪ್ಪ ನೇಮಕ

Update: 2024-08-27 14:35 IST

ಕುಂದಾಪುರ, ಆ.27: ಕಳೆದ 26 ದಿನಗಳಿಂದ ಖಾಲಿಯಾಗಿದ್ದ ಕುಂದಾಪುರ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರ ಹುದ್ದೆಗೆ ನಂಜಪ್ಪಎನ್. ಅವರನ್ನು ನೇಮಕ ಮಾಡಲಾಗಿದೆ.

2003ರಲ್ಲಿ ಉಪನಿರೀಕ್ಷಕರಾಗಿ ಸೇವೆಗೆ ನಿಯುಕ್ತಿಯಾಗಿದ್ದ ನಂಜಪ್ಪ, ಶಿವಮೊಗ್ಗ, ದಾವಣಗೆರೆ, ಹಾವೇರಿ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದು ಬಳಿಕ ಪೊಲೀಸ್ ನಿರೀಕ್ಷಕರಾಗಿ ಆಗಿ ಬಡ್ತಿ ಹೊಂದಿ, ಕಡೂರು, ಭದ್ರಾವತಿ ಯಲ್ಲಿ ಹಾಗೂ ಪ್ರಸ್ತುತ ನಾಲ್ಕು ವರ್ಷಗಳಿಂದ ಗಂಗೊಳ್ಳಿ ಕರಾವಳಿ ಕಾವಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕುಂದಾಪುರ ನಗರ ಠಾಣೆಯ ಹಿಂದಿನ ಪೊಲೀಸ್ ನಿರೀಕ್ಷಕ ನಂದಕುಮಾರ್ ಅವರಿಗೆ ಜು.31ರಂದು ವಯೋ ನಿವೃತ್ತಿಯಾಗಿದ್ದು ಅಲ್ಲಿಂದ ಠಾಣೆಗೆ ಪೊಲೀಸ್ ನಿರೀಕ್ಷಕರು ಇರಲಿಲ್ಲ. ಈ ಬಗ್ಗೆ ’ವಾರ್ತಾಭಾರತಿ’ ಇತ್ತೀಚೆಗೆ ವರದಿ ಕೂಡ ಪ್ರಕಟಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News