×
Ad

ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಹಿನ್ನೆಲೆ: ಹೆಬ್ರಿ ಕೂಡ್ಲು ಫಾಲ್ಸ್ ತಾತ್ಕಾಲಿಕ ನಿರ್ಬಂಧ

Update: 2024-11-22 19:51 IST

ಹೆಬ್ರಿ, ನ.22: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ಎನ್‌ಕೌಂಟರ್ ನಡೆದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರಸಿದ್ಧ ಪ್ರವಾಸಿ ತಾಣ ಕೂಡ್ಲು ಫಾಲ್ಸ್ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕೂಡ್ಲು ಫಾಲ್ಸ್ ಇರುವ ಪ್ರದೇಶದಲ್ಲೇ ನಕ್ಸಲ್ ಚಟುವಟಿಕೆ ಮತ್ತೇ ಬಿರುಸುಗೊಂಡಿರುವುದು ಹಾಗೂ ನಕ್ಸಲ್ ನಿಗ್ರಹ ಪಡೆಯ ಪೊಲೀಸರಿಂದ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡನ ಮನೆ ಕೂಡ ಕೂಡ್ಲು ಫಾಲ್ಸ್ ಸಮೀಪದಲ್ಲೇ ಇದೆ. ಮುಂದಿನ ಒಂದು ವಾರ ಕೂಡ್ಲು ಫಾಲ್ಸ್ ಬಂದ್ ಇರಲಿದೆ ಎಂದು ಸೋಮೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಂ ಬಾಬು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News