×
Ad

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಮುಹಮ್ಮದ್ ಗೌಸ್ ಮಿಯ್ಯಾರ್ ರಿಗೆ ಸನ್ಮಾನ

Update: 2023-12-04 15:52 IST

ಕಾರ್ಕಳ, ಡಿ4: ಗಣಿತ ನಗರ ಜ್ಞಾನಸುಧ ಶಿಕ್ಷಣ ಸಂಸ್ಥೆಯಲ್ಲಿ ನಡೆದ 19ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವಕ, ಉದ್ಯಮಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ, ಮಿಯ್ಯಾರು ಜಾಮಿಯ ಮಸೀದಿಯ ಅಧ್ಯಕ್ಷ, ಜಲ್ವಾ ಎ ನೂರ್ ಮಸೀದಿಯ ಗೌರವಾಧ್ಯಕ್ಷ ಮುಹಮ್ಮದ್ ಗೌಸ್ ಮಿಯ್ಯಾರ್ ಅವರಿಗೆ 'ಸಮಾಜ ಸೇವಾ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಸಮ್ಮೇಳನಾಧ್ಯಕ್ಷ ಸದಾನಂದ ಶೆಣೈ ಸೂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಎಸ್.ಕೆ.ಎಫ್. ಮೂಡುಬಿದಿರೆ, ಗೋಧಾಮ ಮುನಿಯಾಲು ಸಂಸ್ಥಾಪಕ ಡಾ.ರಾಮಕೃಷ್ಣ ಆಚಾರ್, ನಿವೃತ್ತ ಉಪನ್ಯಾಸಕ ರಾಮ ಭಟ್, ಮುನಿಯಾಲು ಉದಯ ಕ್ರಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್.ರಾಜು, ಡಾ.ಪಿ.ಬಾಲಕೃಷ್ಣ ಆಳ್ವ, ಎನ್.ಎಂ. ಹೆಗ್ಡೆ, ಲಯನ್ಸ್ ಪೂರ್ವ ಜಿಲ್ಲಾ ಗವರ್ನರ್ ಅರುಣ್ ಕುಮಾರ್, ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ರವೀಂದ್ರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News