ಮೂಡ್ಲಕಟ್ಟೆ: ಯುವ ನಾಯಕತ್ವ ಅನ್ವೇಷಣ ಸ್ಪರ್ಧೆ
Update: 2023-12-06 18:55 IST
ಕುಂದಾಪುರ, ಡಿ.6: ಮೂಡ್ಲಕಟ್ಟೆ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಪ್ರಥಮ ಬಿಸಿಎ ಪದವಿ ವರ್ಷದ ವಿದ್ಯಾರ್ಥಿಗಳಿಗೆ ಜಸ್ಟ್ ಆ ಮಿನಿಟ್-ಯುವ ನಾಯಕತ್ವ ಅನ್ವೇಷಣ ಸ್ಪರ್ಧೆ ಯನ್ನು ಡಿ.4ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗಡೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ರಾಮಕೃಷ್ಣ ಹೆಗಡೆ ಮಾತನಾಡಿದರು. ಎಂಬಿಎ ವಿಭಾಗದ ಪ್ರೊ.ವೆಂಕಟೇಶ್ ಶೆಟ್ಟಿ ಹಾಗೂ ಪದವಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕಿ ಪ್ರೊ.ಪಾವನ ತೀರ್ಪುಗಾರರಾಗಿದ್ದರು.
ಉಪ ಪ್ರಾಂಶುಪಾಲ ಪ್ರೊ.ಜಯಶೀಲ್ ಕುಮಾರ್ ಉಪಸ್ಥಿತರಿದ್ದರು. ಪ್ರಥಮ ಬಿಸಿಎ ವಿದ್ಯಾರ್ಥಿನಿ ಸಿಂಚನ ಶೆಟ್ಟಿ ಪ್ರಥಮ ಹಾಗೂ ರಶಿತ ದ್ವಿತೀಯ ಸ್ಥಾನ ಪಡೆದುಕೊಂಡರು.