×
Ad

ಉಡುಪಿ ಬಿಷಪ್ ರಿಂದ ಕ್ರಿಸ್ಮಸ್ ಸಂದೇಶ

Update: 2023-12-23 17:33 IST

ಉಡುಪಿ: ಕ್ರಿಸ್ತ ಜಯಂತಿಯ ಆಚರಣೆಯಲ್ಲಿ ನಾವು ಬೆಳಕಿಗೆ, ದೀಪಾಲಂಕಾರಕ್ಕೆ ಮಹತ್ವ ಕೊಡುತ್ತೇವೆ. ಗೋದಲಿ, ಕ್ರಿಸ್ಮಸ್ ಟ್ರೀ, ನಕ್ಷತ್ರದಲ್ಲಿ ಬೆಳಗಿದ ಬೆಳಕು ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ಬೆಳಕಿನ ಹಬ್ಬ ದೀಪಾವಳಿಯಂತೆ ಕೆಲವೇ ದಿನಗಳಿಗೆ ಸೀಮಿತವಾಗಿದ್ದು ಆನಂತರ ಪುನಃ ಕತ್ತಲು ಆವರಿಸುತ್ತದೆ. ಬೆಳಕು ಬೇಕು ಎಂದಾಗಲೆಲ್ಲ ನಾವು ದೀಪವನ್ನು ಹೋತ್ತಿಸಿ ಕತ್ತಲೆಯನ್ನು ಹೋಗಲಾಡಿಸ ಬೇಕಾಗಿದೆ. ದೇವರಿಂದ ಹೊರಹೊಮ್ಮಿದ ನಿಜ ಬೆಳಕು ಮಾತ್ರ ಈ ಕತ್ತಲೆಯನ್ನು ಹೋಗಲಾಡಿಸಬಲ್ಲದು. ಇದು ಆಧ್ಯಾತ್ಮಿಕ ಜ್ಯೋತಿ ಎಂದು ಅವರು ಹೇಳಿದ್ದಾರೆ.

ಕತ್ತಲಿನಲ್ಲಿ ಸಂಚರಿಸುತ್ತಿದ್ದ ಜನರಿಗೆ ಒಂದು ಮಹಾಜ್ಯೋತಿ ಕಾಣಿಸಿತು. ಮರಣದ ನೆರಳಿನಲ್ಲಿ ನೆಲೆಸಿದ ನಾಡಿನಲ್ಲಿ ಆ ಜ್ಯೋತಿ ಪ್ರಜ್ವಲಿಸಿತು. ಈ ದೀರ್ಘ ದರ್ಶನ ದೇಹಾಂಬರವಾಗಿ ಈ ಲೋಕದಲ್ಲಿ ಜನ್ಮತಳೆದು ಪ್ರಭು ಕ್ರಿಸ್ತರಲ್ಲಿ ಪ್ರತ್ಯಕ್ಷ ವಾಯಿತು. ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ. ಜಗತ್ತನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ ಎಂದರು ಪ್ರಭು ಯೇಸು.

ಮಾನವರೆಲ್ಲರನ್ನು ಬೆಳಗಿಸಲು ಈ ಲೋಕಕ್ಕೆ ಆಗಮಿಸಿದ ಬೆತ್ಲೇಮಿನ ಬಾಲ ಯೇಸು ನಮ್ಮ ಮಾನಸಿಕ ಮತ್ತು ಆತ್ಮಿಕ ಅಂಧಕಾರವನ್ನು ನೀಗಿಸಿ ನಮ್ಮನ್ನು ಸತ್ಯಮಾರ್ಗದಲ್ಲಿ ನಡೆಸಲಿ. ಇದೇ ಕ್ರಿಸ್ತ ಜಯಂತಿಯ ಶುಭಾಷಯಗಳು ಮತ್ತು ಹೊಸ ವರ್ಷದ ಹಾರೈಕೆಗಳು ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News