ಪ್ಲೆಸೆಂಟ್ ಪಾಲುದಾರರಿಗೆ ‘ಇನ್‌ಸ್ಪಾಯರಿಂಗ್ ಬಿಸಿನೆಸ್ ಮ್ಯಾನ್’ ಪ್ರಶಸ್ತಿ
ಕುಂದಾಪುರ, ಜ.12: ಕುಂದಾಪುರ ಪರಿಸರದಲ್ಲಿ ಸತತ 20 ವರ್ಷಗಳಿಂದ ‘ಪ್ಲೆಸೆಂಟ್’ ಹೆಸರಿನಲ್ಲಿ ಗೃಹ ಉಪಯೋಗಿ ವಸ್ತುಗಳ ಮಾರಾಟ ಮಳಿಗೆ ಸಂಸ್ಥೆಯನ್ನು ನಡೆಸುತ್ತಿರುವ ಸಂಸ್ಥೆಯ ಪಾಲುದಾರರಾದ ಅಬ್ದುಲ್ ಬಶೀರ್ ಕೋಟ ಹಾಗೂ ಇಬ್ರಾಹಿಂ ಕೋಟ ಅವರಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ‘ಇನ್‌ಸ್ಪಾಯರಿಂಗ್ ಬಿಸಿನೆಸ್ ಮ್ಯಾನ್’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸಿಟಿ ಅಧ್ಯಕ್ಷ ರಾಘವೇಂದ್ರ ಕುಲಾಲ್ ವಹಿಸಿದ್ದರು. ವೇದಿಕೆಯಲ್ಲಿ ಜೆಸಿಐನ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಸಿಟಿ ಜೆಸಿಐ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ಡಾ. ಸೋನಿ, ರಾಘವೇಂದ್ರ ಚರಣ ನಾವಡ, ಕಾರ್ಯದರ್ಶಿ ಮಹಾರುದ್ರ, ಲೇಡಿ ಜೆಸಿ ಸಂಯೋಜಇ ರೇಷ್ಮಾ ಕೋಟ್ಯಾನ್ ಉಪಸ್ಥಿತರಿದ್ದು ಸಾಧಕರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷ ನಾಗೇಶ್ ನಾವಡ, ಚಂದ್ರಕಾಂತ್, ಜಯಚಂದ್ರ ಶೆಟ್ಟಿ, ಗಿರೀಶ್ ಹೆಬ್ಬಾರ್, ಅಭಿಲಾಶ್ ಬಿ.ಎ ಹಾಗೂ ಸದಸ್ಯ ಪ್ರಸಾದ್ ಭಾಗವಹಿಸಿದ್ದರು.