ತಾಯಿ, ಮಗಳಿಗೆ ರಾಜ್ಯಮಟ್ಟದ ಫಿಲಾಟಲಿಯಲ್ಲಿ ಕಂಚಿನ ಪದಕ
Update: 2024-01-12 18:36 IST
ಉಡುಪಿ, ಜ.12: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ‘ಕರ್ನಾಪೆಕ್ಸ್ 2024’ ರಲ್ಲಿ ಉಡುಪಿ ಅಂಚೆ ವಿಭಾಗದ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರ ಸಂಗ್ರಹಣೆ ‘ಸ್ಪೆಷಲ್ ನ್ಯಾಷನಲ್ ಆ್ಯಂಡ್ ಇಂಟರ್‌ನ್ಯಾಷನಲ್ ಡೇಸ್’ ಮತ್ತು ಪ್ರಜ್ಞಾ ಜನಾರ್ದನ್ ಕೊಡವೂರು ಇವರ ಸಂಗ್ರಹದ ‘ಆರ್ಮಿ ಪೋಸ್ಟಲ್ ಕವರ್’ಗೆ ಕಂಚಿನ ಪದಕದ ಪುರಸ್ಕಾರ ದೊರೆತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ಬೆಂಗ ಳೂರು ದಕ್ಷಿಣ ವಲಯದ ಪೋಸ್ಟ್‌ಮಾಸ್ಟರ್ ಜನರಲ್ ಎಲ್.ಕೆ. ದಾಸ್, ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್ ಹಾಗು ಜನರಲ್ ಮ್ಯಾನೇಜರ್ ಡಿಎಪಿ ಜೂಲಿಯಾ ಮೋಹಾಪಾತ್ರ ಉಪಸ್ಥಿತರಿದ್ದರು.