ಹೆಚ್ಚಿನ ಲಾಭಾಂಶ ನೀಡುವುದಾಗಿ ವಂಚನೆ: ಪ್ರಕರಣ ದಾಖಲು
Update: 2024-02-20 19:51 IST
ಶಿರ್ವ, ಫೆ.20: ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಯಾ(38) ಎಂಬವರಿಗೆ 2023ರ ನ.15ರಂದು ವಾಟ್ಸಾಪ್ ಗ್ರೂಪ್‌ನಲ್ಲಿ ಸೇರ್ಪಡೆಗೊಳ್ಳುವಂತೆ ರಿಕ್ವೆಸ್ಟ್ ಬಂದಿದ್ದು, ಅದರಂತೆ ಗ್ರೂಪಿಗೆ ಸೇರಿದ ಮಾಯಾ ಅವರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಹಣ ಹೂಡಿಕೆ ಮಾಡಲು ಸೂಚಿಸಲಾಗಿತ್ತು.
ಅದರಂತೆ ಮಾಯಾ ಜ.28ರಿಂದ ಹಂತ ಹಂತವಾಗಿ ಲಕ್ಷಾಂತರ ರೂ. ಹಣವನ್ನು ಆರೋಪಿಗಳು ಸೂಚಿಸಿದ ಖಾತೆ ಹಾಕಿ ದ್ದರು. ಆದರೆ ಆರೋಪಿಗಳು ನಂಬಿಸಿ ಆನ್‌ಲೈನ್ ಮೂಲಕ ಒಟ್ಟು 9,30,000ಲಕ್ಷ ರೂ. ಹಣವನ್ನು ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.