×
Ad

ಯೋಗ ದಿನಾಚರಣೆ ಜಾಗೃತಿಗಾಗಿ ಮರಳುಶಿಲ್ಪ ಕಲಾಕೃತಿ

Update: 2025-06-20 19:52 IST

ಕುಂದಾಪುರ, ಜೂ.20: ಮಾನಸಿಕ ಮತ್ತು ದೈಹಿಕವಾದ ಸದೃಢ ಆರೋಗ್ಯಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ಯೋಗ ದಿನಾಚರಣೆ ಪ್ರಯುಕ್ತ ಕುಂದಾಪುರ ಕೋಟೇಶ್ವರ ಹಳೆ ಅಲಿವೆ ಕಡಲತೀರದಲ್ಲಿ ಮರಳು ಶಿಲ್ಪದ ಮೂಲಕ ಜನಜಾಗೃತಿಯನ್ನು ಸಾರುವ ಕಲಾಕೃತಿ ರಚಿಸಲಾಯಿತು.

ಯೋಗಪಟುವನ್ನು ಕೇಂದ್ರವಾಗಿಸಿಕೊಂಡು ಸ್ಯಾಂಡ್‌ಥೀಂ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಉತ್ತಮ ಆರೋಗ್ಯಕ್ಕಾಗಿ ಎಂಬ ಧ್ಯೇಯದೊಂದಿಗೆ 3 ಅಡಿ ಮತ್ತು 7 ಅಡಿ ಎತ್ತರ ಅಗಲದ ಮರಳು ಕಲಾಕೃತಿಯನ್ನು ರಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News