ಮನೆಯೊಳಗೆ ಜಾರಿ ಬಿದ್ದು ವ್ಯಕ್ತಿ ಮೃತ್ಯು
Update: 2025-07-06 19:25 IST
ಹಿರಿಯಡ್ಕ: ಮನೆಯೊಳಗೆ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜು.5ರಂದು ರಾತ್ರಿ ವೇಳೆ ಬೊಮ್ಮರಬೆಟ್ಟು ಗ್ರಾಮದ ಕೆಳ ಅರ್ಬಿ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಶೇಖರ ನಾಯಕ್(60) ಎಂದು ಗುರುತಿಸ ಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮನೆಯಲ್ಲಿ ರಾತ್ರಿ ಮೂತ್ರ ವಿಸರ್ಜನೆಗೆ ಅಥವಾ ನೀರು ಕುಡಿಯಲು ಎದ್ದು ಹೋಗಿದ್ದು, ಈ ವೇಳೆ ಮನೆಯ ಒಳಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.