ಬ್ರಹ್ಮಾವರ: ಮಹಿಳೆಗೆ 15.95 ಲಕ್ಷ ರೂ. ಆನ್‌ಲೈನ್ ವಂಚನೆ; ಪ್ರಕರಣ ದಾಖಲು
Update: 2025-12-23 22:01 IST
ಬ್ರಹ್ಮಾವರ, ಡಿ.23: ಹೂಡಿಕೆ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮ್ರಗೋಡು ಗ್ರಾಮದ ಅರುಣ ಆಚಾರ್ಯ(30) ಎಂಬವರ ಇನ್ಟಗ್ರಾಮ್ ಖಾತೆಗೆ 2024ರ ಜು.22ರಂದು ಕಂಪೆನಿಯೊಂದರ ಹೆಸರಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಜಾಹಿರಾತು ಬಂದಿದ್ದು ಈ ಬಗ್ಗೆ ಅರುಣ ಆಸಕ್ತಿ ಹೊಂದಿ ಆರೋಪಿಯು ನೀಡಿದ್ದ ಮೊಬೈಲ್ ಸಂಖ್ಯೆ ಸಂಪರ್ಕಿಸಿದಾಗ ಆರೋಪಿಯು ವಾಟ್ಸಾಪ್ ಮೂಲಕ ಹಣ ಹೂಡಿಕೆ ಮಾಡಿ ಲಾಭ ಗಳಿಸುವ ಬಗ್ಗೆ ತರಬೇತಿ ನೀಡಿದ್ದನು.
ಮೊದ ಮೊದಲು ಅರುಣ ಹೂಡಿಕೆ ಮಾಡಿದ ಹಣಕ್ಕೆ ಅಧಿಕ ಲಾಭವನ್ನು ನೀಡಿದ್ದು, ಇದನ್ನು ನಂಬಿ ಅರುಣ 2024ರ ಸೆಪ್ಟಂಬರ್‌ನಿಂದ 2024ರ ಡಿ.19ರವರೆಗೆ ತನ್ನ ಖಾತೆಗಳಿಂದ ಆರೋಪಿಗಳ ಖಾತೆಗೆ ಹಂತಹಂತವಾಗಿ ಒಟ್ಟು 15,95,005.90ರೂ. ಹಣವನ್ನು ವರ್ಗಾವಣೆ ಮಾಡಿ ಹೂಡಿಕೆ ಮಾಡಿದ್ದರು. ಆದರೆ ಆರೋಪಿಗಳು ಈ ಹಣವನ್ನು ಈವರೆಗೆ ವಾಪಾಸ್ಸು ನೀಡದೇ ವಂಚಿಸಿರುವುದಾಗಿ ದೂರಲಾಗಿದೆ.