ಗ್ರಾಪಂ ಆಹಾರ ಖಾತ್ರಿ ಸದಸ್ಯೆಗೆ ಬೆದರಿಕೆ: ಪ್ರಕರಣ ದಾಖಲು
Update: 2025-12-23 22:03 IST
ಕುಂದಾಪುರ, ಡಿ.23: ತಲ್ಲೂರು ಗ್ರಾಮ ಪಂಚಾಯತ್‌ನಲ್ಲಿ ಆಹಾರ ಖಾತ್ರಿಯ ಸದಸ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಯೊಡ್ಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲ್ಲೂರು ಗ್ರಾಮ ಪಂಚಾಯತ್‌ನಲ್ಲಿ ಆಹಾರ ಖಾತ್ರಿಯ ಸದಸ್ಯರಾಗಿ ರುವ ಉಪ್ಪಿನಕುದ್ರು ಗ್ರಾಮದ ಲಕ್ಷ್ಮೀ(55) ಎಂಬವರು ಡಿ.22ರಂದು ಸಂಜೆ ಉಪ್ಪಿನಕುದ್ರು ನ್ಯಾಯಬೆಲೆ ಅಂಗಡಿಗೆ ರೇಷನ್ ತರಲು ಮನೆಯಿಂದ ಹೋಗುತಿದ್ದರು. ಆಗ ಆರೋಪಿಗಳಾದ ಗೀತಾ ಮತ್ತು ಮೀನಾಕ್ಷಿ ಎಂಬವರು ಲಕ್ಷ್ಮೀ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವುದು ದೂರಲಾಗಿದೆ.