ಪ್ರವೀಣ ಕುಮಾರಿಗೆ ಪಿಎಚ್‌ಡಿ ಪದವಿ
Update: 2025-07-07 17:02 IST
ಉಡುಪಿ, ಜು.7: ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಂ.ಸಿ.ಎ ವಿಭಾಗದ ಸಹ ಪ್ರಾಧ್ಯಾಪಕಿ ಪ್ರವೀಣ ಕುಮಾರಿ ಎಂ.ಕೆ. ಮಂಡಿಸಿರುವ ‘ಅಡ್ವನ್ಸ್‌ಡ್ ಡಾಟಾ ಅನಲಿಸಿಸ್ ಮೊಡೆಲ್ ಫಾರ್ ಇಂಟೆಲಿಜೆಂಟ್ ಟ್ರಾನ್ಸ್‌ಫೋರ್ಟ್ ಸಿಸ್ಟಮ್ ಇನ್ ಸ್ಮಾಟ್ ಸಿಟಿ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ.
ಇವರು ಮಂಗಳೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಚೇರ್ಮನ್ ಹಾಗೂ ಸೀನಿಯರ್ ಪ್ರೊಫೆಸರ್ ಮಂಜಯ್ಯ ಡಿ.ಎಚ್. ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದರು. ಪ್ರವೀಣ ಕುಮಾರಿ ಎಂ.ಕೆ. ಪುತ್ತೂರು ಕೃಷ್ಣನಗರ ನಿವಾಸಿ, ನಿವೃತ್ತ ಪಿಎಸ್‌ಐ ಪಿ.ಎಂ.ಕೃಷ್ಣ ನಾಯ್ಕ್ ಹಾಗೂ ಯಶೋದಾ ಕೃಷ್ಣ ಇವರ ಪುತ್ರಿ. ಇವರ ಪತಿ ನಾರಾಯಣ ಬಡೆಕ್ಕಿಲ ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಪ್ರಧಾನ ಕಚೇರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.