×
Ad

ಬೈಂದೂರು: ನಿಟ್ಟೆ ಕಾಲೇಜು ವಿದ್ಯಾರ್ಥಿ ನಾಪತ್ತೆ

Update: 2025-03-27 23:28 IST

ಬೈಂದೂರು: ನಿಟ್ಟೆ ಕಾಲೇಜು ವಿದ್ಯಾರ್ಥಿ ಯಡ್ತರೆ ಗ್ರಾಮದ ಮಹಾಬಲೇಶ್ವರ ಎಂಬವರ ಮಗ ಅಬಿನಂದನ್(20) ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ನಿಟ್ಟೆ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಿಎಲ್‌ಎಸ್‌ಐ ಪದವಿಯಲ್ಲಿ ಓದಿಕೊಂಡು ಕಾಲೇಜಿನ ಹಾಸ್ಟೇಲ್‌ನಲ್ಲಿ ಉಳಕೊಂಡಿದ್ದನು. ರಜೆಯಲ್ಲಿ ಬೈಂದೂರು ಮನೆಗೆ ಬಂದು ಹೋಗುತ್ತಿದ್ದನು. ಫೆ.೨೧ರಂದು ಮನೆಗೆ ಬಂದು ಮರುದಿನ ಮನೆಯಿಂದ ಕಾಲೇಜಿಗೆ ಹೋದವನು ಒಂದೆರಡು ಬಾರಿ ಕರೆ ಮಾಡಿದ್ದನು. ಮಹಾಬಲೇಶ್ವರ ಮಾ.26ರಂದು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಬಗ್ಗೆ ವಿಚಾರ ಮಾಡಿದಾಗ ಆತ ಕಾಲೇಜಿಗೆ ರಜೆ ಹಾಕಿ ಕಾಲೇಜಿನಿಂದ ಹೋಗಿರುವ ವಿಚಾರ ತಿಳಿದುಬಂತು. ಆತ ಮೊಬೈಲ್ ಕಾಲ್ ಕೂಡ ಸ್ವೀಕರಿಸದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News