ಪಡುಬಿದ್ರೆ: ಟೂತ್‌ಪೇಸ್ಟ್ ಬದಲು ಇಲಿ ಪಾಷಾಣ ಬಳಸಿದ ವ್ಯಕ್ತಿ ಮೃತ್ಯು
Update: 2023-11-07 20:55 IST
ಪಡುಬಿದ್ರೆ: ಟೂತ್‌ಪೇಸ್ಟ್ ಬದಲು ಇಲಿ ಪಾಷಾಣದಿಂದ ಹಲ್ಲು ಉಜ್ಜಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ವೆಂಕಪ್ಪ (53) ಎಂದು ಗುರುತಿಸಲಾಗಿದೆ. ಇವರು ನ.1ರಂದು ಬಚ್ಚಲು ಮನೆಯಲ್ಲಿ ಹಲ್ಲು ಉಜ್ಜಲು ಟೂತ್ ಪೇಸ್ಟ್ ಬದಲು ಅಲ್ಲಿಯೇ ಇದ್ದ ಇಲಿ ಪಾಷಾಣವನ್ನು ಬಳಸಿದ್ದರು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಇವರು, ನ.6ರಂದು ಸಂಜೆ ವೇಳೆ ಮುಕ್ಕಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟರು.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.