ಪಡುಬಿದ್ರಿ | ಆಟೊ ರಿಕ್ಷಾಕ್ಕೆ ಬಸ್ ಢಿಕ್ಕಿ: ಪ್ರಯಾಣಿಕ ಮೃತ್ಯು
Update: 2025-06-12 10:47 IST
ಪಡುಬಿದ್ರಿ: ಅಟೊ ರಿಕ್ಷಾಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕನೊರ್ವ ಮೃತಪಟ್ಟಿದ್ದು, ರಿಕ್ಷಾ ಚಾಲಕ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಗುರುವಾರ ಪಡುಬಿದ್ರಿ ಕಾಂಜರಕಟ್ಟೆಯಲ್ಲಿ ನಡೆದಿದೆ.
ಮೃತ ಪ್ರಯಾಣಿಕನ ಹೆಸರು ತಿಳಿದು ಬಂದಿಲ್ಲ. ಅಟೊ ಚಾಲಕ ಕಂಚಿನಡ್ಕ ನಿವಾಸಿ ಹಂಝ ಗಂಭೀರ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಬಸ್ ಢಿಕ್ಕಿ ಹೊಡೆದ ಪರಿಣಾಮ ಅಟೊ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ.