ಪಡುಬಿದ್ರೆ | ಮೊಬೈಲ್‌ನಲ್ಲಿ ತಲಾಖ್ : ಪತಿ ವಿರುದ್ಧ ಪತ್ನಿ ದೂರು
ಪಡುಬಿದ್ರೆ, ಆ.8: ಪತಿಯ ಮನೆಯಲ್ಲಿ ಕಿರುಕುಳ ನೀಡುತ್ತಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿ ಮೊಬೈಲ್ ಸಂದೇಶದಲ್ಲಿ ಪತ್ನಿಗೆ ತಲಾಖ್ ನೀಡಿರುವ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಎರ್ಮಾಳು ತೆಂಕ ಗ್ರಾಮದ ನಿವಾಸಿ ಸುಹಾನಾ ಎಂಬವರನ್ನು ಎರ್ಮಾಳು ಗುಜ್ಜಿ ಹೌಸ್‌ನ ಮುಬೀನ್ ಶೇಖ್ ಎಂಬಾತನಿಗೆ 2024ರ ಅಕ್ಟೋಬರ್‌ನಲ್ಲಿ ವಿವಾಹವಾಗಿ ಮಾಡಿಕೊಡಲಾಗಿತ್ತು. ಮದುವೆಯಾದ ಒಂದು ತಿಂಗಳ ಬಳಿಕ ಸುಹಾನಾರನ್ನು ಗಂಡನ ಮನೆಯವರು ವರದಕ್ಷಿಣೆಗಾಗಿ ಪೀಡಿಸತೊಡಗಿದ್ದರು. 2024ರ ಡಿಸೆಂಬರ್‌ನಲ್ಲಿ ಪತಿ ಮುಬೀನ್ ವಿದೇಶಕ್ಕೆ ತೆರಳಿದ್ದಾನೆ. ಬಳಿಕ ಪತಿಯ ಮನೆಯಲ್ಲಿ ಮಾವ ಉಮರ್ ಸಾಹೇಬ್, ಅತ್ತೆ ಆಬೀದ, ಮೈದುನ ಮುಖ್ತಾರ್, ನಾದಿನಿ ರಿಹಾನ, ರಶೀನ್ ಹಾಗೂ ರಿಹಾನಳ ಪತಿ ಶಾಹೀದ್ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದರು. ಈ ಮಧ್ಯೆ ಸುಹಾನರನ್ನು ನೋಡಲು ತಂದೆಗೆ ನಾದಿನಿ ರಶೀನ್ ಕೈಯಿಂದ ಬೆನ್ನಿಗೆ ಹೊಡೆದಿದ್ದಾಳೆ ಎಂದು ದೂರಲಾಗಿದೆ.
ಈ ಮಧ್ಯೆ ಜುಲೈ 15ರಂದು ಮುಬೀನ್ ಶೇಖ್ ಪತ್ನಿ ಸುಹಾನಾರಿಗೆ ಮೊಬೈಲ್ ಸಂದೇಶದಲ್ಲಿ ತಲಾಖ್ ನೀಡಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.