ಪಡುಬಿದ್ರಿ | ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ದಾಸಸಾಹಿತ್ಯ ಪ್ರೀತಿಪದವಾದ ಸಾಹಿತ್ಯ: ಮನೋರಮಾ ಹೆಜಮಾಡಿ
ಪಡುಬಿದ್ರಿ: ಕನ್ನಡ ಸಾಹಿತ್ಯದಲ್ಲಿ ಪ್ರೀತಿಪದವಾದ ಸಾಹಿತ್ಯ ದಾಸ ಸಾಹಿತ್ಯವಾಗಿದೆ. ಇಂತಹ ಸಾಹಿತ್ಯ ಸಮ್ಮೇಳನಗಳು ವಿವಿಧ ಗೋಷ್ಟಿಗಳಿಂದ ಎಲ್ಲರನ್ನೂ ಸಾಹಿತ್ಯದ ರಂಗದಲ್ಲಿ ಜೀವಂತವಾಗಿರಿಸಿವೆ ಎಂದು ಹಿರಿಯ ಸಾಹಿತಿ ಮನೋರಮಾ ಹೆಜಮಾಡಿ ಹೇಳಿದರು.
ಅವರು ಶನಿವಾರ ಹೆಜಮಾಡಿಯ ಬಿಲ್ಲವರ ಸಂಘದ ಸಭಾಭವನದಲ್ಲಿ ನಡೆದ ಕಾಪು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಫಕೀರ್ ಮುಹಮ್ಮದ್ ಕಟ್ಪಾಡಿ ಮಾತನಾಡಿ, ಸಮ್ಮೇಳನದ ಸಂಯೋಜನೆ ಯಶಸ್ವಿಯಾಗಿದೆ. ಸಾಹಿತ್ಯದ ಅಭಿಮಾನ ಇಲ್ಲಿನ ಜನತೆಯಲ್ಲಿ ಇನ್ನೂ ಹಸಿರಾಗಿಸಿದೆ ಎಂದರು.
ಅದಾನಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ದಯಾನಂದ ಹೆಜಮಾಡಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಮಂಜುಳಾ ಶೆಟ್ಟಿ, ನೀಲಾನಂದ ನಾಯ್ಕ್ ಮತ್ತಿತರರು ಇದ್ದರು.
ಸನ್ಮಾನ :
ಸಾಧಕ ಸಂಸ್ಥೆ ಹೆಜಮಾಡಿ ಬಿಲ್ಲವರ ಸಂಘ, ಸಾಧಕರಾದ ಗಣೇಶ್ ರಾವ್ ಎಲ್ಲೂರು (ರಂಗಭೂಮಿ), ಉಚ್ಚಿಲ ಬಾಲಕೃಷ್ಣ ಪೂಜಾರಿ (ಮಾಧ್ಯಮ), ನಿವೃತ್ತ ಮೆಸ್ಕಾಂ ಅಧಿಕಾರಿ ಎಚ್.ಪರಮೇಶ್ವರ, ವಿ.ಕೆ.ಹೆಜಮಾಡಿ (ಶಿಕ್ಷಣ), ಓಂ ದಾಸ್ ಕಣ್ಣಂಗಾರ್ ಹೆಜಮಾಡಿ (ಹೊರನಾಡು ಕನ್ನಡ ಸೇವೆ) ಹಾಗೂ ಶಾಂತ ಸೇರಿಗಾರ್ ಪಡುಬೆಳ್ಳೆ (ತುಳು ಅಧ್ಯಯನ) ಅವರನ್ನು ಸನ್ಮಾನಿಸಲಾಯಿತು. ಓಂ ದಾಸ್ ಕಣ್ಣಂಗಾರ್, ಎಚ್.ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು.
ರಸಪ್ರಶ್ನೆಯ ವಿಭಾಗದಲ್ಲಿ ವಿಜೇತರಾದ ವಿಶ್ವೇಶ ತೀರ್ಥ ಮಹಾ ವಿದ್ಯಾಲಯ ಪಾಜಕ (ಪ್ರಥಮ), ತೃಷಾ ಕಾಲೇಜು ಕಟಪಾಡಿ(ದ್ವಿತೀಯ), ಸೈಂಟ್ ಮೇರೀಸ್ ಪದವಿ ಕಾಲೇಜು, ಕಾಪು ಪ್ರಥಮ ದರ್ಜೆ ಕಾಲೇಜು, ಎಂಎಸ್ ಆರ್ ಎಸ್ ಶಿರ್ವ (ತೃತೀಯ), ಬಹುಮಾನವನ್ನು ವಿತರಿಸಲಾಯಿತು. ಸ್ವಾಗತ ಸಮಿತಿಯ ಅಧ್ಯಕ್ಷ ದಯಾನಂದ ಹೆಜಮಾಡಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ ಅವರನ್ನು ಕಸಾಪ ಕಾಪು ವತಿಯಿಂದ ಗೌರವಿಸಲಾಯಿತು.
ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಅವರು ಅಧ್ಯಕ್ಷೀಯ ಭಾಷಣಗೈದರು.
ಜತೆ ಕಾರ್ಯದರ್ಶಿ ಕೃಷ್ಣಕುಮಾರ್ ಮಟ್ಟು ಸ್ವಾಗತಿಸಿದರು. ಅನಂತ ಮೂಡಿತ್ತಾಯ ಅವರು ಮನೋರಮಾ ಹೆಜಮಾಡಿ ಅವರನ್ನು ಪರಿಚಯಿಸಿದರು. ದೇವದಾಸ್ ಪಾಟ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್ ವಂದಿಸಿದರು.
ವಿಚಾರಗೋಷ್ಠಿ, ಕವಿಗೋಷ್ಠಿ:
ಇದಕ್ಕೂ ಮೊದಲು ನಡೆದ ವಿಚಾರಗೋಷ್ಠಿಯಲ್ಲಿ ಉಡುಪಿಯ ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಕಥಾ ಸ್ವಾರಸ್ಯದ ವಿಷಯದಲ್ಲಿ ವಿಚಾರ ಮಂಡಿಸಿದರು.
ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತ ಕವಯತಿ ಫಾತಿಮಾ ರಲಿಯಾ ಹೆಜಮಾಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭಾಷೆಯಲ್ಲಿ ವಸುಂದರಾ ಕೆ.ಟಿ. ಕಾಪು, ಶೃತಿಕಾ ಎರ್ಮಾಳು, ತುಳು ಭಾಷೆಯಲ್ಲಿ ಜೆನೆಟ್ ಜೆ. ಅಮ್ಮಣ್ಣ ಪಾಂಗಾಳಗುಡ್ಡೆ, ಓಂದಾಸ್ ಕಣ್ಣಂಗಾರ್, ಹೆಜಮಾಡಿ, ಬ್ಯಾರಿ ಭಾಷೆ ಹಮೀದ್ ಪಡುಬಿದ್ರಿ, ಕೊರಗ ಭಾಷೆಯಲ್ಲಿ ಸತೀಶ್ ಪಡುಬಿದ್ರಿ, ಕೊಂಕಣಿ ಭಾಷೆಯಲ್ಲಿ ಗೀತಾ ವಾಗ್ಲೆ ಬಂಟಕಲ್ಲು ಕವನ ಸ್ವರಚಿತ ವಾಚಿಸಿದರು. ಯಶೋಧಾ ಎಲ್ಲೂರು ಕಾರ್ಯಕ್ರಮ ನಿರ್ವಹಿಸಿದರು.