ಪಡುಬಿದ್ರಿ | ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ : ಇಬ್ಬರು ಆರೋಪಿಗಳ ಬಂಧನ
Update: 2025-12-15 23:19 IST
ಸಾಂದರ್ಭಿಕ ಚಿತ್ರ
ಪಡುಬಿದ್ರಿ, ಡಿ.15: ಇಲ್ಲಿಗೆ ಸಮೀಪದ ಮಹಾದೇವಿ ಟೂರಿಸ್ಟ್ ಹೋಮ್ ಎಂಬ ಕಟ್ಟಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಡಿ.14ರಂದು ಬಂಧಿಸಿದ್ದಾರೆ.
ಯತಿರಾಜ್ ಶೆಟ್ಟಿ ಪೊಲ್ಯ ಮತ್ತು ನವೀನ್ ಪೂಜಾರಿ ಬಂಧಿತ ಆರೋಪಿಗಳು. ಇವರು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯರನ್ನು ಪುಸಲಾಯಿಸಿ ಕಳ್ಳಸಾಗಾಣಿಕೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.