×
Ad

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಆರು ಕೃತಿಗಳ ಲೋಕಾರ್ಪಣೆ

Update: 2023-10-12 18:38 IST

ಉಡುಪಿ, ಅ.12: ಪೂರ್ಣಪ್ರಜ್ಞ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಪರಿಷತ್ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಕಾಲೇಜಿನ ವಿವಿಧ ಅಧ್ಯಾಪಕರ ಆರು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು ಎಲ್ ಮತ್ತು ಭೌತಶಾಸ್ತ್ರ ಉಪನ್ಯಾಸಕ ಅತುಲ್ ಭಟ್ ಜಂಟಿಯಾಗಿ ರಚಿಸಿದ ‘ಇಂಟ್ರಡಕ್ಷನ್ ಟು ಆಸ್ಟ್ರೋನಮಿ ಆ್ಯಂಡ್ ಸ್ಪೇಸ್ ಎಕ್ಸ್‌ಪ್ಲೋರೇಶನ್’, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜು ನಾಥ ಕರಬ ಅವರ ಪೌರಾಣಿಕ ಕಾದಂಬರಿ ‘ಕೃಷ್ಣಾರ್ಪಣಂ’, ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಹವ್ಯಕ ಕನ್ನಡ ಭಾಷೆಯಲ್ಲಿ ಛಂದೋಬದ್ಧವಾಗಿ ರಚಿಸಿದ ‘ಬಾಣದ್ ಸೇತ್ವೆ’ ಯಕ್ಷಗಾನ ಪ್ರಸಂಗ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮಿ ಅವರ ಪರಾಮರ್ಶನ ಕೃತಿ ‘ಇಂಟರ್‌ನ್ಯಾಷನಲ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್’, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯರಾದ ಜ್ಯೋತಿಆಚಾರ್ಯ, ಪ್ರತಿಭಾ ಭಟ್ ಹಾಗೂ ಸುಮಲತಾ ಜೊತೆಯಾಗಿ ರಚಿಸಿದ ಪರಾಮ ರ್ಶನ ಕೃತಿ ‘ಪ್ರಿನ್ಸಿಪಲ್ಸ್ ಆಫ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್’ ಕೃತಿಗಳನ್ನು ಅನಾವರಣಗೊಳಿಸಿದ ಶ್ರೀಪಾದರು ಕೃತಿಕಾರರಿಗೆ ಶುಭಕೋರಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಪಿಪಿಸಿ ಸ್ವಾಯತ್ತ ಕಾಲೇಜಾಗಿ ಪರಿವರ್ತನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಅಧ್ಯಾಪಕರು ಸಂಶೋಧನೆ ಮತ್ತು ಸೃಜನಶೀಲ ಕೃತಿಗಳನ್ನು ರಚಿಸಿ ಪ್ರಕಟಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಧ್ಯಾಪಕರು, ವಿದ್ಯಾರ್ಥಿಗಳು ಹೊಸ ಹೊಸ ಕೃತಿಗಳನ್ನು ರಚಿಸುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಾಜೇಂದ್ರ ಎಸ್. ನಾಯಕ್, ದೃಢವೃತ ಗೋರಿಕ್, ಪುರುಷೋತ್ತಮ ಅಡ್ವೆ, ಪ್ರಾಂಶುಪಾಲ ಡಾ.ರಾಮು ಎಲ್., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಸಂತ ರವಿಪ್ರಕಾಶ್, ಡಾ. ರಮೇಶ್ ಟಿ.ಎಸ್, ಜಯಲಕ್ಷ್ಮೀ ಹಾಗೂ ಕೃತಿಕಾರರು ಉಪಸ್ಥಿತರಿದ್ದರು. ಗಣಿತ ವಿಭಾಗದ ಮುಖ್ಯಸ್ಥ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News