ತಂಬಾಕು ತನಿಖಾ ದಳದಿಂದ ದಾಳಿ: ದಂಡ ವಸೂಲಿ
Update: 2023-08-24 20:49 IST
ಉಡುಪಿ, ಆ.24: ಉಡುಪಿ ತಾಲೂಕಿನಲ್ಲಿ ಕೋಟ್ಟಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಬುಧವಾರ ಮಣಿಪಾಲದ ರಾಜೀವನಗರ, ಪ್ರಗತಿನಗರ ಮುಂತಾದ ಕಡೆಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, 28 ಪ್ರಕರಣಗಳನ್ನು ದಾಖಲಿಸಿ, 4000 ರೂ. ದಂಡ ವಸೂಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಹಿರಿಯ ಆರೊಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಮಣಿಪಾಲ ಠಾಣೆಯ ಎಎಸ್‌ಐ ಗಂಗಪ್ಪ ಎಸ್, ಶಿಕ್ಷಣ ಸಂಯೋಜಕ ಶಂಕರ್, ಎನ್.ಟಿ.ಸಿ.ಪಿ ವಿಭಾಗದ ಸಾಮಾಜಿಕ ಕಾರ್ಯಕರ್ತೆ ಶೈಲಾ ಶ್ಯಾಮನೂರ್, ಕಾರ್ಮಿಕ ನಿರೀಕ್ಷಕ ಸಂಜಯ್, ನಗರಸಭೆಯ ಯೋಗೀಶ್‌ಮತ್ತಿತರರು ಉಪಸ್ಥಿತರಿದ್ದರು.