ಕೋಳಿ ಅಂಕಕ್ಕೆ ದಾಳಿ: ಮೂವರ ಸೆರೆ
Update: 2024-09-02 21:19 IST
ಕುಂದಾಪುರ, ಸೆ.2: ಇಲ್ಲಿನ ಕಡಗಿ ರಸ್ತೆಯ ಬಳಿ ಸೆ.1ರಂದು ಸಂಜೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ದಿವಾಕರ, ಅನುಪ್ ಕುಮಾರ್, ಲಾಲು ಪ್ರಸನ್ನ ಬಂಧಿತ ಆರೋಪಿಗಳು. ಇವರಿಂದ 1,650ರೂ. ನಗದು ಹಾಗೂ 3 ಹುಂಜಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.