×
Ad

ಆ.15ರಂದು ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮ

Update: 2024-08-14 18:41 IST

ಉಡುಪಿ, ಆ.14: ಸಮಸ್ತ ಜಂ ಇಯ್ಯತುಲ್ ಉಲಮಾ ನೇತೃತ್ವದ ಎಸ್‌ವೆೃಎಸ್ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮವು ಆ.15ರಂದು ಅಪರಾಹ್ನ 4 ಗಂಟೆಗೆ ಎರ್ಮಾಳ್ ಮದ್ರಸ ವಠಾರದಲ್ಲಿ ನಡೆಯಲಿದೆ.

ಸಮಸ್ತ ಮುಶಾವರ ಸದಸ್ಯ ಶೆೃಖುನಾ ಉಸ್ಮಾನ್ ಫೆೃಝಿ ಸಂಗಮವನ್ನು ಉದ್ಘಾಟಿಸಲಿದ್ದು, ಯೂಸುಫ್ ಸವಾದ್ ಫೆೃಝಿಯವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ. ಫಾ.ಜೋಸ್ಸಿ ಫರ್ನಾಂಡಿಸ್, ಗಣಪತಿ ಭಟ್, ನಿವೃತ್ತ ಕಸ್ಟಮ್ಸ್ ಅಧಿಕಾರಿ ರೋಹಿತ್ ಹೆಗ್ಡೆ, ಪಡುಬಿದ್ರಿ ಠಾಣಾಧಿಕಾರಿ ಎಸ್.ಪ್ರಸನ್ನ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News