×
Ad

ಕ.ರಾ.ರ.ಸಾ. ನಿಗಮದ ಪ್ರತಿಷ್ಠಿತ ವಾಹನಗಳ ಪ್ರಯಾಣ ದರ ಕಡಿತ

Update: 2026-01-03 19:57 IST

ಉಡುಪಿ, ಜ.3: ಕ.ರಾ.ರ.ಸಾ.ನಿಗಮದ ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಿವಿಧ ಮಾದರಿಯ ಲಕ್ಸುರಿ ವಾಹನಗಳ ಪ್ರಯಾಣ ದರವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10ರಿಂದ 15ರವರೆಗೆ ಕಡಿತಗೊಳಿ ಸಲಾಗುತ್ತಿದೆ. ಇದೇ ಜನವರಿ 5ರಿಂದ ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬಹುದು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಕುಂದಾಪುರದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಕುಂದಾಪುರಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವು ಅಂಬಾರಿ ಉತ್ಸವ ಸಾರಿಗೆಯಲ್ಲಿ 1510 ರೂ., ಡ್ರೀಮ್‌ಕ್ಲಾಸ್ ಸಾರಿಗೆಯಲ್ಲಿ 1350 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1310 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1110 ರೂ., ನಾನ್ ಎಸಿ ಸ್ಲೀಪರ್‌ನಲ್ಲಿ 1050 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್‌ನಲ್ಲಿ 1100 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 750 ರೂ.ಗಳು ಇರಲಿವೆ.

ಉಡುಪಿಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಉಡುಪಿಗೆ ಒಟ್ಟು ಪ್ರಯಾಣ ದರವು ಪ್ರತಿ ಪ್ರಯಾಣಿಕರಿಗೆ ಅಂಬಾರಿ ಉತ್ಸವ ಸಾರಿಗೆ ಯಲ್ಲಿ 1460 ರೂ., ಡ್ರೀಮ್‌ಕ್ಲಾಸ್ ಸಾರಿಗೆಯಲ್ಲಿ 1300 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1250 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1060 ರೂ., ನಾನ್ ಎಸಿ ಸ್ಲೀಪರ್‌ನಲ್ಲಿ 1000 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ನಲ್ಲಿ 1060 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 700 ರೂ.ಗಳಾಗಿವೆ.

ಇನ್ನು ಮಂಗಳೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರವು ಅಂಬಾರಿ ಉತ್ಸವ ಸಾರಿಗೆಯಲ್ಲಿ 1350 ರೂ., ಡ್ರೀಮ್‌ಕ್ಲಾಸ್ ಸಾರಿಗೆಯಲ್ಲಿ 1200 ರೂ., ಮಲ್ಟಿ ಆಕ್ಸಿಲ್ 2.0 ಸಾರಿಗೆಯಲ್ಲಿ 1150 ರೂ., ಮಲ್ಟಿ ಆಕ್ಸಿಲ್ ಸಾರಿಗೆಯಲ್ಲಿ 1000 ರೂ., ನಾನ್ ಎಸಿ ಸ್ಲೀಪರ್‌ನಲ್ಲಿ 900 ರೂ., ಪಲ್ಲಕ್ಕಿ ನಾನ್ ಎಸಿ ಸ್ಲೀಪರ್‌ನಲ್ಲಿ 950 ರೂ. ಹಾಗೂ ರಾಜಹಂಸ ಸಾರಿಗೆಯಲ್ಲಿ 650ರೂ.ಗಳಷ್ಟು ಇರಲಿವೆ ಎಂದು ಮಂಗಳೂರು ಕ.ರಾ.ರ.ಸಾ.ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News