ಸೆ.29ರಂದು ಧಾರ್ಮಿಕ ಪ್ರವಚನ
Update: 2023-09-27 19:22 IST
ಉಡುಪಿ, ಸೆ.27: ಜಮೀಯತೆ ಅಹ್ಲೆ ಹದೀಸ್ ಉಡುಪಿ ಶಾಖೆ ವತಿಯಿಂದ ಕುಂಜಿಬೆಟ್ಟುವಿನ ಮಸ್ಜೀದ್ ಎ ಉಸ್ಮಾನ್ ಬಿನ್ ಅಫ್ಫಾನ್‌ನಲ್ಲಿ ಸೆ.29ರಂದು ಹಿರಿಯ ಇಸ್ಲಾಮಿ ವಿದ್ವಾಂಸ ಶೇಕ್ ಝಫರುಲ್ ಹಸನ್ ಮದನಿ ಶಾರ್ಜಾ ಜುಮಾ ಖುತ್ಬಾ ನೀಡಲಿದ್ದಾರೆ.
ಅಂದು ಜಮೀಯತೆ ಅಹ್ಲೆ ಹದೀಸ್ ಕಾಪು ವತಿಯಿಂದ ಮಲ್ಲಾರ್ ಕಾಪುವಿನ ಮುಸ್ ಅಬ್ ಬಿನ್ ಉಮೈರ್ ಸಲಫಿ ಮಸೀದಿ ಯಲ್ಲಿ ಮಗ್ರಿಬ್ ನಮಾಝಿ ನಂತರ ಶೇಕ್ ಝಫರುಲ್ ಹಸನ್ ಮದನಿ ಶಾರ್ಜಾ ಪ್ರವಚನ ನೀಡಲಿರು ವರು ಎಂದು ಪ್ರಕಟಣೆ ತಿಳಿಸಿದೆ.