ಆ.13ರಂದು ಧಾರ್ಮಿಕ ಪ್ರವಚನ ಕಾರ್ಯಕ್ರಮ
Update: 2023-08-12 22:11 IST
ಉಡುಪಿ, ಆ.12: ಅಲ್ ಹಿಕ್ಮಾ ಗೈಡೆಂಸ್ಸ್ ಸೆಂಟರ್ ಉಡುಪಿ ವತಿಯಿಂದ ಜಮೀಯತೆ ಅಹ್ಲೆ ಹದೀಸ್ ಉಡುಪಿ ಶಾಖೆ ಸಹಯೋಗದೊಂದಿಗೆ ‘ಯುವಕರು: ಸಮಸ್ಯೆ ಮತ್ತು ಪರಿಹಾರ’ ವಿಷಯದ ಕುರಿತು ಧಾರ್ಮಿಕ ಪ್ರವಚನ ಕಾರ್ಯಕ್ರಮವು ಆ.13ರಂದು ಮಗ್ರಿಬ್ ನಮಾಝ್ ನಂತರ ಕುಂಜಿಬೆಟ್ಟುವಿನ ಇಸ್ಲಾಮಿಕ್ ದಾವ ಸೆಂಟರ್‌ನಲ್ಲಿ ನಡೆಯಲಿದೆ.
ಭಾರತದ ಖ್ಯಾತ ವಿದ್ವಾಂಸ, ಬೆಂಗಳೂರಿನ ಕುಲ್ಲಿಯತುಲ್ ಹದೀಸ್‌ನ ಪ್ರೊಫೆಸರ್ ಶೇಕ್ ಹಾಫೀಝ್ ಅಬ್ದುಲ್ ಹಸೀಬ್ ಉಮರಿ ಮದನಿ ಪ್ರವಚನ ನೀಡಲಿರವರು ಎಂದು ಪ್ರಕಟಣೆ ತಿಳಿಸಿದೆ.